ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದ ಬೆನ್ನಲ್ಲೇ ರೈತರನ್ನು ಅಪಖ್ಯಾತಿಗೊಳಿಸುವಂತೆ ಸಂಘಪರಿವಾರ ಶಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಸಿರು ಪೇಟ ಧರಿಸಿದ ಓರ್ವ ವ್ಯಕ್ತಿಯ ಚಿತ್ರವನ್ನು ಸಂಘಪರಿವಾರ ಶಕ್ತಿಗಳು ಪೋಸ್ಟ್ ಮಾಡಿ, ಸಿಖ್ ವೇಷದಲ್ಲಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಕೃಷಿಕನಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದೆ.
ಸತ್ಯ ಶೋಧನಾ ವರದಿಯ ಪ್ರಕಾರ, ವೈರಲ್ ಆಗುತ್ತಿರುವ ಚಿತ್ರವನ್ನು ನಜೀರ್ ಮುಹಮ್ಮದ್ ಅವರು ತಮ್ಮ ಫೇಸ್ಬುಕ್ ಪ್ರೊಫೈಲ್ ನಲ್ಲಿ ಏಪ್ರಿಲ್ 8ರಂದು ಪೋಸ್ಟ್ ಮಾಡಿದ್ದರು. ಸಂಘಪರಿವಾರ ಶಕ್ತಿಗಳು ಈತ ಸಿಖ್ ವೇಷ ಧರಿಸಿ ಇತ್ತೀಚೆಗಿನ ದೆಹಲಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸ್ಲಿಂ ವ್ಯಕ್ತಿ ಎಂದು ಸುಳ್ಳು ಸುದ್ದಿಯನ್ನು ಹರಡಿದ್ದಾರೆ.
ಬಿಜೆಪಿ ಯುವ ಮೋರ್ಚಾ ದೆಹಲಿ ರಾಜ್ಯ ಕಾರ್ಯದರ್ಶಿ ಅಭಿಮನ್ಯು ತ್ಯಾಗಿ ಚಿತ್ರವನ್ನು ಹಂಚಿಕೊಂಡಿದ್ದು, “ನವದೀಪ್ ಮೋಹನ್ಪುರಿಯಾಗಿ ಬದಲಾದ ನಜೀರ್ ಮುಹಮ್ಮದ್” ಎಂದು ಸುಳ್ಳು ಪ್ರಚಾರಮಾಡಿದ್ದಾರೆ.
ಸುಳ್ಳು ಸುದ್ದಿ ವೈರಲ್ ಆದ ನಂತರ ನಜೀರ್ ಅವರು ತನ್ನ ಫೇಸ್ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡಿದ್ದಾರೆ.