ನವದೆಹಲಿ: ಆಗಸ್ಟ್ 19ರಂದು ನಡೆದ ರುಚಿ ಸೋಯಾ ನಿರ್ದೇಶಕ ಮಂಡಳಿ ಸಭೆಯಲ್ಲಿ ಬಾಬಾ ರಾಮ್ ದೇವ್ ಅವರನ್ನು ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಸಭೆಯಲ್ಲಿ ಭರತ್ ಅವರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಾಗೂ ಆಚಾರ್ಯ ಬಾಲಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕಳೆದ ವರ್ಷ ಪತಂಜಲಿ ಆಯುರ್ವೇದ ಸಂಸ್ಥೆಯು ರುಚಿ ಸೋಯಾ ಕಂಪೆನಿಯನ್ನು 4,350 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿತ್ತು. ಈ ಮೂವರ ನೇಮಕಕ್ಕೆ ಷೇರುದಾರರ ಒಪ್ಪಿಗೆ ಬೇಕಿದೆ ಎಂದು ರುಚಿ ಸೋಯಾ ಕಂಪನಿ ತಿಳಿಸಿದೆ.