ಬೆಂಗಳೂರು : ಕೋಮು ವಿಷ ಕಾರುವ ಪೋಸ್ಟ್ ಕಾರ್ಡ್ ಎಂಬ ವೆಬ್ ಸೈಟ್ ನ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಎಂಬಾತ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರನ್ನು ʼಭಾರತದ ಅತೀದೊಡ್ಡ ಭಯೋತ್ಪಾದಕʼ ಎಂದು ಟ್ವೀಟ್ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
“ಭೋಪಾಲ್ ಅನಿಲ ದುರಂತದ ಮೂಲಕ ಲಕ್ಷಾಂತರ ಜನರನ್ನು ಬಲಿ ಪಡೆದ ವ್ಯಕ್ತಿ, ಇಂದಿರಾ ಸಾವಿನ ನಂತರ ಲಕ್ಷಾಂತರ ಸಿಖ್ಖರನ್ನು ಹತ್ಯೆಗೈಯಲು ಕರೆ ನೀಡಿದ್ದ ವ್ಯಕ್ತಿ, ಬೋಫೋರ್ಸ್ ಹಗರಣದಲ್ಲಿ ಸೈನಿಕರ ಜೀವಗಳೊಂದಿಗೆ ಚೆಲ್ಲಾಟವಾಡಿದ ವ್ಯಕ್ತಿ, ಆತ ಭಾರತದ ಅತೀದೊಡ್ಡ ಭಯೋತ್ಪಾದಕ ರಾಜೀವ್ ಗಾಂಧಿ” ಎಂದು ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್ ಮಾಡಿದ್ದಾನೆ.
ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಟ್ವೀಟ್ ಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, “ಭೋಪಾಲ್ ಅನಿಲ ದುರಂತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂದು ನಿನಗೆ ಗೊತ್ತೇ? ಅದು 4000ಕ್ಕಿಂತ ಹೆಚ್ಚಾಗಿರಲಿಲ್ಲ. ಗುಜರಾತ್ ಗಲಭೆಯಲ್ಲಿ ಮೋದಿ ಅದಕ್ಕಿಂತಲೂ ಹೆಚ್ಚು ಜನರನ್ನು ಹತ್ಯಾಕಾಂಡ ನಡೆಸಿದ್ದಾರೆ. ಇದೀಗ ಕೊರೋನಾ ಸೋಂಕಿನಿಂದ ಎಷ್ಟು ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ ಎಂಬುದು ಲೆಕ್ಕಕ್ಕೇ ಸಿಗುತ್ತಿಲ್ಲ. ಸುಳ್ಳು ಹೇಳುವುದು ಮೊದಲೇ ನೀವು ಕಲಿತಿದ್ದರೇ? ಅಥವಾ ಬಿಜೆಪಿಗೆ ಸೇರಿದ ಬಳಿಕ ಅದು ತನ್ನಿಂತಾನೆಯೇ ಬರುತ್ತದೆಯೇ? ಎಂದು ಕೇಳಿದ್ದಾರೆ.