Home ಟಾಪ್ ಸುದ್ದಿಗಳು ಮೆಹಬೂಬಾ ತ್ರಿವರ್ಣ ಧ್ವಜ ಹೇಳಿಕೆ ಸ್ವೀಕಾರಾರ್ಹವಲ್ಲ : ಕಾಂಗ್ರೆಸ್ ಟೀಕೆ

ಮೆಹಬೂಬಾ ತ್ರಿವರ್ಣ ಧ್ವಜ ಹೇಳಿಕೆ ಸ್ವೀಕಾರಾರ್ಹವಲ್ಲ : ಕಾಂಗ್ರೆಸ್ ಟೀಕೆ

ಶ್ರೀನಗರ : ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿ ಜಮ್ಮು-ಕಾಶ್ಮೀರ ಮಾಜಿ ಸಿಎಂ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಹೇಳಿಕೆಯನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಖಂಡಿಸಿದೆ. ಮೆಹಬೂಬಾ ಅವರ ಹೇಳಿಕೆಯು ಸ್ವೀಕಾರಾರ್ಹವಲ್ಲ ಮತ್ತು ಅದು ಜನರ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ.

“ಇಂತಹ ಹೇಳಿಕೆಗಳು ಅಸಹಿಷ್ಣುತೆಯಿಂದ ಕೂಡಿವೆ, ಇವುಗಳನ್ನು ಯಾವದೇ ಸಮಾಜ ಒಪ್ಪುವುದಿಲ್ಲ’’ ಎಂದು ಜೆಕೆಪಿಸಿಸಿ ಮುಖ್ಯ ವಕ್ತಾರ ರವೀಂದರ್ ಶರ್ಮಾ ಹೇಳಿದ್ದಾರೆ.

ರಾಷ್ಟ್ರಧ್ವಜ ದೇಶದ ಗೌರವದ ಸಂಕೇತ ಮತ್ತು ಅದಕ್ಕಾಗಿ, ಭಾರತದ ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಭಾರತೀಯರು ಬಲಿದಾನಗಳನ್ನು ನೀಡಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮೆಹಬೂಬಾ ಅವರ ಹೇಳಿಕೆಯು ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿರುವುದಾಗಿದೆ ಮತ್ತು ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ರಾಜ್ಯ ಧ್ವಜ ಮರಳಿದರೆ, ಮಾತ್ರ ತಾವು ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂಬರ್ಥದಲ್ಲಿ ಮೆಹಬೂಬಾ ಹೇಳಿಕೆ ನೀಡಿದ್ದರು.

ನ.17ರಿಂದ ಕಾಲೇಜು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೋವಿಡ್ – 19 ಪ್ರಕರಣಗಳು ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ಕಾಲೇಜು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯೇ? ತಪ್ಪೇ? ಎಂಬ ಬಗ್ಗೆ ‘ಪ್ರಸ್ತುತ’ ಜನಾಭಿಮತ ಸಂಗ್ರಹಿಸುತ್ತಿದೆ. ಈ ಬಗ್ಗೆ ನಿಮ್ಮ ನಿಲುವನ್ನು ‘ಪ್ರಸ್ತುತ’ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಪಡಿಸಿ.

Join Whatsapp
Exit mobile version