ಬೆಂಗಳೂರು : ಮನೆಗಳಲ್ಲಿ ಬಳಕೆ ಮಾಡಿದ ಮಾಸ್ಕ್ ವಿಲೇವಾರಿ ಸಂಬಂಧ ಕೂಡಲೇ ಮಾರ್ಗಸೂಚಿ ಜಾರಿಗೊಳಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ
ಪಿಪಿಇ ಕಿಟ್ ಮತ್ತು ಬಳಕೆಯಾದ ಮಾಸ್ಕ್ ವಿಲೇವಾರಿ ವಿಷಯ ಅತ್ಯಂತ ಮಹತ್ವದ್ದು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. ಎನ್-95 ಮಾಸ್ಕ್ ದರ ನಿಗದಿ ಪಡಿಸುವಂತೆಯೂ ಕೋರ್ಟ್ ಸರಕಾರಕ್ಕೆ ಸೂಚಿಸಿದೆ.
ಬೆಂಗಳೂರಿನಲ್ಲಿ 1.30 ಕೋಟಿ ಜನರಿದ್ದು, ಒಬ್ಬರು ಒಂದು ಮಾಸ್ಕ್ ಬಳಸಿದರೂ, 1.30 ಕೋಟಿ ಮಾಸ್ಕ್ ಬಳಸಿದಂತಾಗುತ್ತದೆ. ಅದರ ವಿಲೇವಾರಿ ಸರಿಯಾದ ಮಾರ್ಗದಲ್ಲಿ ಆಗಬೇಕು. ಅವುಗಳ ವಿಲೇವಾರಿ ಬಗ್ಗೆ ಪೌರ ಕಾರ್ಮಿಕರಿಗೂ ತರಬೇತಿ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.