ಮಾರುಕಟ್ಟೆಗಳಲ್ಲಿ ಲಾಕ್ ಡೌನ್ ಜಾರಿ | ಕೇಂದ್ರಕ್ಕೆ ಮನವಿ ಸಲ್ಲಿಸಲು ಮುಂದಾದ ದಿಲ್ಲಿ ಸರಕಾರ

Prasthutha|

ದಿಲ್ಲಿಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಕೊರೋನ ಹಾಟ್ ಸ್ಪಾಟ್ ಗಳಾಗಿ ಪರಿವರ್ತನೆಯಾಗಬಹುದಾದ ಮಾರುಕಟ್ಟೆ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲು ಅಧಿಕಾರ ನೀಡುವಂತೆ ಕೇಂದ್ರಕ್ಕೆ ದಿಲ್ಲಿ ಸರಕಾರ ಮನವಿ ಸಲ್ಲಿಸಲು ಮುಂದಾಗಿದೆ.

- Advertisement -

ಮದುವೆ ಮತ್ತಿತರ ಸಮಾರಂಭದಲ್ಲಿ 200 ಮಂದಿ ಅತಿಥಿಗಳಿಗೆ ಸೇರಲು ಅವಕಾಶ ನೀಡಿದ್ದ ಆದೇಶವನ್ನು ಹಿಂಪಡೆಯಲು ದಿಲ್ಲಿ ಸರಕಾರ ನಿರ್ಧರಿಸಿದೆ.

ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜಧಾನಿಯ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಜನರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದುದು ಕಂಡುಬಂದಿತ್ತು. ಮಾರ್ಗಸೂಚಿ ನಿಯಮಗಳು ಉಲ್ಲಂಘನೆಯಾಗುತ್ತಿರುವ ಇಂತಹ ಸ್ಥಳಗಳಲ್ಲಿ ಸೋಂಕು ಹೆಚ್ಚುವ ಸಾಧ್ಯತೆ ಇದ್ದು, ಲಾಕ್ ಡೌನ್ ಜಾರಿಗೊಳಿಸುವ ಅನಿವಾರ್ಯವಿದೆ” ಎಂದು ಹೇಳಿದರು.

Join Whatsapp