Home ಟಾಪ್ ಸುದ್ದಿಗಳು ಮಳಲಿ ಮಸೀದಿ ವಿವಾದ: ಜುಲೈ 22ಕ್ಕೆ ತೀರ್ಪು ಪ್ರಕಟಿಸಲಿರುವ ಮಂಗಳೂರು ನ್ಯಾಯಾಲಯ

ಮಳಲಿ ಮಸೀದಿ ವಿವಾದ: ಜುಲೈ 22ಕ್ಕೆ ತೀರ್ಪು ಪ್ರಕಟಿಸಲಿರುವ ಮಂಗಳೂರು ನ್ಯಾಯಾಲಯ

ಮಂಗಳೂರು: ಮಳಲಿ ಜುಮಾ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ನಗರದ ಮೂರನೇ ಸಿವಿಲ್ ನ್ಯಾಯಾಲಯವು ಜುಲೈ 22ಕ್ಕೆ ತನ್ನ ತೀರ್ಪನ್ನು ಪ್ರಕಟಿಸಲಿದೆ.

ಅರ್ಜಿ ಸಲ್ಲಿಸಿದ ಮಳಲಿ ವ್ಯಾಪ್ತಿಯ ಮನೋಜ್ ಕುಮಾರ್ ಹಾಗೂ ಧನಂಜಯ ಎಂಬವರು ಮತ್ತು ಮಸೀದಿ ಪರ ವಾದಿಸಿದ ವಕೀಲರು ,ಈ ಎರಡು ಕಡೆಯ ವಾದ ಪ್ರತಿವಾದವನ್ನು ಆಲಿಸಿದ ಮಂಗಳೂರು ಮೂರನೇ ಸಿವಿಲ್ ನ್ಯಾಯಾಲಯವು ಜುಲೈ 22ಕ್ಕೆ ತನ್ನ ತೀರ್ಪನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣವು ಸಿವಿಲ್ ನ್ಯಾಯಾಲಯದ ಪರಿಧಿಯಲ್ಲಿದೆಯೇ ಅಥವಾ ವಕ್ಫ್ ನ್ಯಾಯಾಲಯದ ಅಧೀನದಲ್ಲಿದೆಯೇ ಎನ್ನುವುದರ ಕುರಿತು ತೀರ್ಪು ನೀಡುವುದಾಗಿ ಸಿವಿಲ್ ನ್ಯಾಯಾಲಯವು ತಿಳಿಸಿತ್ತು. ಈ ಮಧ್ಯೆ ಪ್ರಕರಣ ಸಂಬಂಧ ಯಾವುದೇ ಆದೇಶಗಳನ್ನು ನೀಡದಂತೆ ಸಿವಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಬೇಕೆಂದು ಕೆಲವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ತಾನು ಸೂಚನೆ ನೀಡುವವರೆಗೆ ಯಾವುದೇ ತೀರ್ಪು ಪ್ರಕಟಿಸಿದಂತೆ ಮಂಗಳೂರಿನ ಸಿವಿಲ್ ನ್ಯಾಯಾಲಯಕ್ಕೆ ಸೂಚಿಸಿತ್ತು.

ಸಿವಿಲ್ ನ್ಯಾಯಾಲಯವು ಹೈಕೋರ್ಟ್ ನ ತೀರ್ಪು ಬಾರದಿರುವ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪನ್ನು ಜುಲೈ 22ಕ್ಕೆ ಕಾಯ್ದಿರಿಸಿ, ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.



Join Whatsapp
Exit mobile version