Home Uncategorized ಮಂಗಳೂರು: ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯಾಗಿ ಮಂಜುನಾಥ್ ನೇಮಕ

ಮಂಗಳೂರು: ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯಾಗಿ ಮಂಜುನಾಥ್ ನೇಮಕ

ಮಂಗಳೂರು: ಚುನಾವಣೆ ಅಕ್ರಮ ತಡೆಗಟ್ಟುವ ಅಧಿಕಾರಿಯನ್ನಾಗಿ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕ ಎಚ್.ಎಸ್. ಮಂಜುನಾಥ್ (ಐಆರ್’ಎಸ್) ಅವರನ್ನು ನೇಮಿಸಲಾಗಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ರಾಜ್ಯದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಮಾದರಿ ನೀತಿ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾರಿಗೊಳಿಸಿ ಚುನಾವಣೆ ಸುಗಮವಾಗಿ ಮುಕ್ತವಾಗಿ ಹಾಗೂ ಶಾಂತಿಯುತವಾಗಿ ನಡೆಸುವ ಕುರಿತು ಯಾವುದೇ ರೀತಿಯ ಚುನಾವಣೆಯ ಅಕ್ರಮಗಳು ನಡೆಯದಂತೆ ನಿಗಾವಹಿಸುವ ಕ್ರಮಕೈಗೊಳ್ಳುವ ಕುರಿತು ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕ ಎಚ್.ಎಸ್. ಮಂಜುನಾಥ್ (ಐಆರ್’ಎಸ್) ಇವರನ್ನು ಚುನಾವಣಾ ಅಕ್ರಮ ತಡೆಗಟ್ಟುವ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಆದ್ದರಿಂದ ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಅಕ್ರಮ ಹಣ ಸಾಗಾಟ, ಅಕ್ರಮ ವಸ್ತುಗಳ ಸಾಗಾಟ ಮತ್ತು ದಾಸ್ತಾನುಗಳು ಹಾಗೂ ಚುನಾವಣಾ ಪ್ರಚೋದನೆಗೆ ಸಂಬಂಧಿಸಿದಂತೆ ಇನ್ನಿತರ ಅಕ್ರಮಗಳು ಕಂಡು/ತಿಳಿದು ಬಂದಲ್ಲಿ ಸಾರ್ವಜಿನಿಕರು ಮಂಜುನಾಥ್ ಅವರ ಮೊಬೈಲ್ ದೂರವಾಣಿ ಸಂಖ್ಯೆ: 9353341788ಕ್ಕೆ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ. ಲಿಖಿತವಾಗಿ ದೂರುಗಳಿದ್ದಲ್ಲಿ ಈ ಕೆಳಕಾಣಿಸಿದ ವಿಳಾಸ ಹಾಗೂ ಈ ಮೇಲ್ ಮೂಲಕ ಕೂಡ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂ.ಆರ್. ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಳಾಸ:
ಮಂಜುನಾಥ್ ಎಚ್.ಎಸ್.
ಉಪ ನಿರ್ದೇಶಕರು, ಆದಾಯ ತೆರಿಗೆ ಇಲಾಖೆ
ALBUQUERE ಹೌಸ್, ಫೋರಮ್ ಫಿಝಾ ಮಾಲ್ ಎದುರು, ಪಾಂಡೇಶ್ವರ
ಮಂಗಳೂರು, ಮೊಬೈಲ್: 9353341788
ಈಮೇಲ್: Mangalore.ddit.inv2@incometax.gov.in

Join Whatsapp
Exit mobile version