Home ಟಾಪ್ ಸುದ್ದಿಗಳು ಭಾರತ ಸರಕಾರದ ಬ್ರಾಹ್ಮಣ ಶ್ರೇಷ್ಠತಾವಾದ ಖಂಡಿಸುವಂತೆ ಕಮಲಾ ಹ್ಯಾರಿಸ್ ಗೆ ಅಮೆರಿಕನ್ ಭಾರತೀಯರ ಆಗ್ರಹ

ಭಾರತ ಸರಕಾರದ ಬ್ರಾಹ್ಮಣ ಶ್ರೇಷ್ಠತಾವಾದ ಖಂಡಿಸುವಂತೆ ಕಮಲಾ ಹ್ಯಾರಿಸ್ ಗೆ ಅಮೆರಿಕನ್ ಭಾರತೀಯರ ಆಗ್ರಹ

ನವದೆಹಲಿ : ಉತ್ತರ ಪ್ರದೇಶದ ಹಥ್ರಾಸ್ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡುವಂತೆ ಒತ್ತಾಯಿಸಿ, ಅಮೆರಿಕ ಉಪಾಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಗೆ ಇ-ಮೇಲ್ ಕಳುಹಿಸುವ ಅಭಿಯಾನ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆ ಈ ವಿಷಯದಂತೆ ಮಾತನಾಡುವಂತೆ ಮತ್ತು ಪ್ರಕರಣ ಮುಚ್ಚಿ ಹಾಕದಂತೆ ಭಾರತೀಯ ಆಡಳಿತಕ್ಕೆ ಕರೆ ನೀಡುವಂತೆ ಅಮೆರಿಕದ ಭಾರತೀಯರು ಒತ್ತಾಯಿಸಿದ್ದಾರೆ.

ಸೀಟಲ್ ಮೂಲದ ಸಾಮಾಜಿಕ ಕಾರ್ಯಕರ್ತ ಈ ಇ-ಮೇಲ್ ಅಭಿಯಾನ ಕಳೆದ ವಾರ ಆರಂಭಿಸಿದ್ದಾರೆ. “ಹಥ್ರಾಸ್ ಲೈಂಗಿಕ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ, ಭಾರತ ಸರಕಾರದ ಬ್ರಾಹ್ಮಣ ಶ್ರೇಷ್ಠತಾವಾದವನ್ನು ಖಂಡಿಸಿ’’ ಎಂದು ಒತ್ತಾಯಿಸಿ ಕಮಲಾ ಹ್ಯಾರಿಸ್ ಗೆ ಇ-ಮೇಲ್ ಗಳನ್ನು ರವಾನಿಸಲು ಭಾರತೀಯರ ನಡುವೆ ಈ ಅಭಿಯಾನ ಹರಡಲ್ಪಟ್ಟಿದೆ.

ಈ ಅಭಿಯಾನದ ಭಾಗವಾಗಿ, ಈಗಾಗಲೇ ಸಾವಿರಾರು ಇ-ಮೇಲ್ ಗಳು ಕಮಲಾ ಹ್ಯಾರಿಸ್ ಗೆ ರವಾನೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

Join Whatsapp
Exit mobile version