Home ಟಾಪ್ ಸುದ್ದಿಗಳು ಭಾರತ ಅತ್ಯಾಚಾರದ ಭೂಮಿಯಾಗಿ ಮಾರ್ಪಟ್ಟಿದೆ : ಮದ್ರಾಸ್ ಹೈಕೋರ್ಟ್

ಭಾರತ ಅತ್ಯಾಚಾರದ ಭೂಮಿಯಾಗಿ ಮಾರ್ಪಟ್ಟಿದೆ : ಮದ್ರಾಸ್ ಹೈಕೋರ್ಟ್

ಚೆನ್ನೈ : ‘ಪವಿತ್ರ ಭಾರತ’ ಈಗ ಅತ್ಯಾಚಾರಿಗಳ ಭೂಮಿಯಾಗಿ ಮಾರ್ಪಟ್ಟಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 15 ನಿಮಿಷಗಳಿಗೆ ಒಂದು ಅತ್ಯಾಚಾರ ನಡೆಯುತ್ತಿದೆ. ದೇಶದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾರೆ. ಪರಿಸ್ಥಿತಿ ತುಂಬಾ ನಿರಾಶಾದಾಯಕವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ನ ನ್ಯಾಯಮೂರ್ತಿ ಕಿರುಬಾಕರನ್ ಹೇಳಿದ್ದಾರೆ. ಅವರ ಈ ಪ್ರತಿಕ್ರಿಯೆ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಚಿತ್ರಣವನ್ನು ಎತ್ತಿ ತೋರಿಸುತ್ತಿದೆ.

ತ್ರಿಪುರಾದಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅಫಿದವಿತ್ ನ್ನು ಪರಿಗಣಿಸುವ ಸಮಯದಲ್ಲಿ ನ್ಯಾಯಾಮೂರ್ತಿಗಳು ಈ ಹೇಳಿಕೆ ನೀಡಿದ್ದಾರೆ. ಅಸ್ಸಾಂ ಮೂಲದ 22 ವರ್ಷದ ಮಹಿಳಾ ಕಾರ್ಮಿಕಳನ್ನು ಕೆಲಸ ಕೊಡಿಸುವ ನೆಪದಲ್ಲಿ ಪಲ್ಲಡಂ ಎಂಬ ಪ್ರದೇಶದಲ್ಲಿ ಸ್ಥಳೀಯ ಐದು ಯುವಕರು ಅತ್ಯಾಚಾರ ಎಸಗಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಕೋರಿ ಹಿರಿಯ ವಕೀಲ ಎಪಿ ಸೂರ್ಯಪ್ರಕಾಶ್ ಅವರು ಅಫಿದವಿತ್ ಸಲ್ಲಿಸಿದ್ದರು. ನ್ಯಾಮೂರ್ತಿಗಳಾದ ಎನ್.ಕಿರುಬಾಕರನ್ ಮತ್ತು ಪಿ. ವೇಲ್ಮುರುಗನ್ ಅವರೊನ್ನೊಳಗೊಂಡ ನ್ಯಾಯಪೀಠ ಈ ಘಟನೆಯ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಡಿಜಿಪಿಗೆ ನಿರ್ದೇಶನ ನೀಡಿತು. ವಲಸೆ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದ ಕಾರಣ ಅವರಿಗೆ ರಕ್ಷಣೆ ಇಲ್ಲ ಮತ್ತು ಅವರು ಅತ್ಯಂತ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ ಎಂದು ವೇಲ್ಮುರುಗನ್ ಹೇಳಿದರು.

Join Whatsapp
Exit mobile version