Home ಟಾಪ್ ಸುದ್ದಿಗಳು ‘ಭಾರತೀಯ ರೂಪಾಂತರ ವೈರಸ್’ ಎಂಬ ಪದ ಬಳಸುವಂತಿಲ್ಲ : ವಿಶ್ವಸಂಸ್ಥೆ

‘ಭಾರತೀಯ ರೂಪಾಂತರ ವೈರಸ್’ ಎಂಬ ಪದ ಬಳಸುವಂತಿಲ್ಲ : ವಿಶ್ವಸಂಸ್ಥೆ

ವಿಶ್ವಸಂಸ್ಥೆ : ಭಾರತದಲ್ಲಿ ಕಾಣಿಸಿಕೊಂಡ ಬಿ.1.617.1 ಹಾಗೂ ಬಿ.1.617.2 ರೂಪಾಂತರಿ ಕೊರೊನಾ ವೈರಸ್‍ಗಳನ್ನು ವಿಶ್ವಸಂಸ್ಥೆ ಕ್ರಮವಾಗಿ ಕಪ್ಪ ಮತ್ತು ಡೆಲ್ಟಾ ಎಂದು ಹೆಸರಿಸಿದ್ದು, ಭಾರತೀಯ ರೂಪಾಂತರಿ ವೈರಸ್ ಎಂಬ ಪದ ಬಳಸಬಾರದು ಎಂದು ವಿಶ್ವಸಂಸ್ಥೆ ಸೂಚಿಸಿದೆ.

ವಿಶ್ವಸಂಸ್ಥೆಯು ಆಯಾ ರಾಷ್ಟ್ರಗಳ ರೂಪಾಂತರಿ ವೈರಸ್‍ಗಳಿಗೆ ಹೆಸರಿಡುವ ಮೂಲಕ ಕಳಂಕಗಳನ್ನು ತೊಡೆದುಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.

ಕೆಲ ಮಾಧ್ಯಮಗಳಲ್ಲಿ ಬಿ.1.617 ರೂಪಾಂತರಿ ವೈರಸ್‍ಗಳನ್ನು ಭಾರತೀಯ ರೂಪಾಂತರಿ ವೈರಸ್ ಎಂದು ಬಿಂಬಿತವಾಗುತ್ತಿದ್ದ ಬಗ್ಗೆ ಭಾರತವು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಭಾರತೀಯ ರೂಪಾಂತರ ವೈರಾಣು ಪದ ಬಳಕೆ ಮಾಡಬಾರದು ಎಂದು ವಿಶ್ವಸಂಸ್ಥೆ ಸೂಚಿಸಿದ್ದು, ಇತರ ದೇಶಗಳ ರೂಪಾಂತರಿ ವೈರಸ್‍ಗಳಿಗೂ ಬೇರೆ ಬೇರೆ ಹೆಸರುಗಳನ್ನು ಗ್ರೀಕ್ ವರ್ಣಮಾಲೆಗಳನ್ನು ಬಳಸಿ ನಾಮಕರಣ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Join Whatsapp
Exit mobile version