Home ಟಾಪ್ ಸುದ್ದಿಗಳು ಭಾರತದ ಸಚಿವ ಸಂಪುಟದಲ್ಲಿ ಬಹುತೇಕ ಅಪರಾಧಿಗಳೇ ತುಂಬಿಕೊಂಡಿದ್ದಾರೆ: ಸಿಂಗಾಪುರ ಪ್ರಧಾನಿ

ಭಾರತದ ಸಚಿವ ಸಂಪುಟದಲ್ಲಿ ಬಹುತೇಕ ಅಪರಾಧಿಗಳೇ ತುಂಬಿಕೊಂಡಿದ್ದಾರೆ: ಸಿಂಗಾಪುರ ಪ್ರಧಾನಿ

ನೆಹರು ಅವರ ಭಾರತ’ ಅಧಃಪತನದತ್ತ ಸಾಗುತ್ತಿದೆ ಎಂದ ಲೀ ಸೀನ್ ಲೂಂಗ್

ಹೊಸದಿಲ್ಲಿ:  ಸಿಂಗಾಪುರ ಸಂಸತ್ತಿನಲ್ಲಿ ಪ್ರಧಾನಿ ಲೀ ಸೀನ್ ಲೂಂಗ್ ಭಾರತೀಯ ಲೋಕಸಭಾ ಸದಸ್ಯರ ಬಗ್ಗೆ ನೀಡಿದ ಹೇಳಿಕೆಗೆ ನರೇಂದ್ರ ಮೋದಿ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸಿಂಗಾಪುರ ಸಂಸತ್ತಿನ ಮಾಜಿ ಸದಸ್ಯನ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡುತ್ತಿರುವ ವೇಳೆ  ಲೀ ಸೀನ್ ಲೂಂಗ್ ಭಾರತವನ್ನು ಉಲ್ಲೇಖಿಸಿ, ಈ ಹೇಳಿಕೆ ನೀಡಿದ್ದಾರೆ.

ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಸಿಂಗಾಪುರ ಸಂಸತ್ತಿನಲ್ಲಿ  ಮಾತನಾಡಿದ ಪ್ರಧಾನಿ ಲೀ ಸೀನ್ ಲೂಂಗ್, ನೆಹರು ಅವರ ಅಧಿಕಾರಾವಧಿಯಲ್ಲಿದ್ದ ಭಾರತವನ್ನು ಉಲ್ಲೇಖಿಸಿದರು. ಆದರೆ ಈಗಿನ  ಭಾರತೀಯ ಲೋಕಸಭೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಳಿವೆ. ಈಗ ‘ನೆಹರು ಅವರ ಭಾರತ’ ಅಧಃಪತನದತ್ತ ಸಾಗುತ್ತಿದೆ ಎಂದು ಹೇಳಿದರು.

ಈ ಬಗ್ಗೆ  ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿಂಗಾಪುರ ಹೈಕಮೀಷನರ್ ಸೈಮನ್ ವಾಂಗ್ ಅವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿ ಭಾರತದ ಸಮಸ್ಯೆಗೆ ಪ್ರತಿಕ್ರಿಯೆಯಾಗಿ ಸಿಂಗಾಪುರ ಪ್ರಧಾನಿಯು ನೀಡಿದ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

Join Whatsapp
Exit mobile version