Home ವಿದೇಶ ಬೈಡನ್ ರ ಗೆಲುವು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಗೆ ಮತ್ತೆ ಮನವಿ ಮಾಡಲಿರುವ ಟ್ರಂಪ್

ಬೈಡನ್ ರ ಗೆಲುವು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಗೆ ಮತ್ತೆ ಮನವಿ ಮಾಡಲಿರುವ ಟ್ರಂಪ್

ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸದಾಗಿ ಚುನಾಯಿತಗೊಂಡಿರುವ ಜೋ ಬೈಡನ್ ರ ಗೆಲುವನ್ನು ರದ್ದುಗೊಳಿಸುವ ಪ್ರಯತ್ನವನ್ನು ಮತ್ತೆ ಮುಂದುವರಿಸಿದ್ದಾರೆ. ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯನ್ನು ರದ್ದುಗೊಳಿಸುವಂತೆ ತಾನು ಮತ್ತೊಮ್ಮೆ ಸುಪ್ರೀಂ ಕೋರ್ಟನ್ನು ಕೋರುವುದಾಗಿ ಟ್ರಂಪ್ ಅಭಿಯಾನ ಹೇಳಿದೆ.  

ಮೇಲ್ ಇನ್ ಬ್ಯಾಲಟ್ ಗಾಗಿ ಇರುವ ರಾಜ್ಯದ ನಿಯಮವನ್ನು ವ್ಯಾಖ್ಯಾನಿಸಿ ಪೆನಿಸಿಲ್ವಾನಿಯಾ ರಾಜ್ಯ ನ್ಯಾಯಾಲಯ ನೀಡಿದ ಮೂರು ತೀರ್ಪನ್ನು ಹಿಂಪಡೆಯುವಂತೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಟ್ರಂಪ್ ಅಭಿಯಾನವು ಹೇಳಿದೆ.      

ಪೆನಿಸಿಲ್ವಾನಿಯಾ ಸುಪ್ರೀಂ ಕೋರ್ಟ್ ಪ್ರಕರಣಗಳ ಮೂರು ತೀರ್ಪು 2020ರ ಅಧ್ಯಕ್ಷೀಯ ಚುನಾವಣೆಗೆ ಮುಂಚೆ ಮತ್ತು ನಂತರ ದಿಢೀರನೆ ಪೆನ್ಸಿಲ್ವಾನಿಯಾದ ಮೈಲ್ ಬ್ಯಾಲೆಟ್ ಕಾನೂನನ್ನು ಅಕ್ರಮವಾಗಿ ಬದಲಾಯಿಸಿದೆ ಎಂದು ಅಭಿಯಾನ ಹೇಳಿದೆ.

“ಮೇಲ್ಮನವಿಯು ಸಂಬಂಧಿತ ಪೆನಿಸಿಲ್ವಾನಿಯಾ ಪ್ರಕರಣವನ್ನು ಅನುಕರಿಸಿದೆ. ಅದರಲ್ಲಿ ನ್ಯಾಯಮೂರ್ತಿ ಅಲಿಟೊ ಮತ್ತು ಇಬ್ಬರು ಇತರ ನ್ಯಾಯಮೂರ್ತಿಗಳು “ಸುಪ್ರೀಂ ಕೋರ್ಟ್ (ಪೆನ್ಸಿಲ್ವನಿಯಾ) ನ ನಿರ್ಣಯದ (ಮೈಲ್ ಬ್ಯಾಲಟ್ ಗಳ ಸ್ವೀಕಾರ ದಿನಾಂಕವನ್ನು ಚುನಾವಣಾ ದಿನದಂದು ರಾತ್ರಿ 8 ಗಂಟೆಯಿಂದ ಮೂರುದಿನಗಳ ಬಳಿಕ ಸಂಜೆ 5 ಗಂಟೆಯ ತನಕ ವಿಸ್ತರಿಸಿದ) ಸಾಂವಿಧಾನಿಕತೆಯು ರಾಷ್ಟೀಯ ಪ್ರಾಮುಖ್ಯತೆಯ ವಿಷಯವಾಗಿದೆ. ಸುಪ್ರೀಂ ಕೋರ್ಟ್ ನಿರ್ಣಯವು ಫೆಡರಲ್ ಸಂವಿಧಾನವನ್ನು ಉಲ್ಲಂಘಿಸಿರುವ ಸಾಧ್ಯತೆಯಿದೆ” ಎಂದು ಅವಲೋಕನ ಮಾಡಿದ್ದರು” , ಎಂದು ಟ್ರಂಪ್ ರ ಅಟಾರ್ನಿ ರೂಡಿ ಗಿಲಿಯಾನಿ ಅಭಿಯಾನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೀರ್ಪು ಚುನಾವಣಾ ದಿನದಂದು ಮೈಲ್ ಇನ್ ಬ್ಯಾಲೆಟ್ ಮೇಲಿರುವ ಸಹಿಗಳು ಸಾಚಾವಾಗಿದೆಯೇ ಎಂಬುದನ್ನು ಪರಿಶೀಲಿಸುವುದನ್ನು ನಿಷೇಧಿಸಿದೆ ಮತ್ತು ಮೈಲ್ ಬ್ಯಾಲೆಟ್ ನ ಖೋಟಾ ಸಹಿಗಳು ಮತ್ತು ಇತರ ಅಕ್ರಮಗಳನ್ನು ಪ್ರಶ್ನಿಸುವ ಅಭಿಯಾನದ ಹಕ್ಕನ್ನು ನಿರಾಕರಿಸಿತ್ತು ಎಂದು ಟ್ರಂಪ್ ಅಭಿಯಾನವು ಹೇಳಿದೆ.

Join Whatsapp
Exit mobile version