ಬಿಜೆಪಿಯ ಭ್ರಷ್ಟೋತ್ಸವ ಅಡೆತಡೆಯಿಲ್ಲದೆ ಸಾಗುತ್ತಿದೆ: ಕಾಂಗ್ರೆಸ್ ವಾಗ್ದಾಳಿ

Prasthutha|

ಬೆಂಗಳೂರು: ಬಿಜೆಪಿಯ ಜನೋತ್ಸವ ಮುಂದೂಡಿಕೆಯ ಮೇಲೆ ಮುಂದೂಡಿಕೆಯಾಗುತ್ತಿದೆ. ಆದರೆ ಭ್ರಷ್ಟೋತ್ಸವ ಮಾತ್ರ ಅಡೆತಡೆಯಿಲ್ಲದೆ ಸಾಗುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿಯ ಜನೋತ್ಸವ ಮುಂದೂಡಿಕೆಯ ಮೇಲೆ ಮುಂದೂಡಿಕೆಯಾಗುತ್ತಿದೆ. ಆದರೆ ಬಿಜೆಪಿಯ ಭ್ರಷ್ಟೋತ್ಸವ ಮಾತ್ರ ಅಡೆತಡೆಯಿಲ್ಲದೆ ಸಾಗುತ್ತಿದೆ. ಮಾಧುಸ್ವಾಮಿಯವರ ರಾಜೀನಾಮೆ ಕೇಳಿದ ಶಾಸಕ ಎಸ್.ಟಿ. ಸೋಮಶೇಖರ ಅವರ ಅಕ್ರಮದ ವಿರುದ್ಧ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಈಗ ಯಾರ ರಾಜೀನಾಮೆ ಪಡೆಯುವಿರಿ ಎಂದು ಬೊಮ್ಮಾಯಿ ಅವರೇ? ಮಾಧುಸ್ವಾಮಿಯವರದ್ದೋ, ಸೋಮಶೇಖರ್’ರದ್ದೋ? ಎಂದು ಪ್ರಶ್ನಿಸಿದೆ.

ಮತ್ತೊಮ್ಮೆ ಜನೋತ್ಸವ ಮುಂದೂಡಲಾಗಿದೆಯಂತೆ. ಭ್ರಷ್ಟೋತ್ಸವ ಮಾಡುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಜನೋತ್ಸವ ಮಾಡುವ ಶಕ್ತಿಯೂ ಇರಲಿಲ್ಲ. ಈಗ ಯೋಗವೂ ಇಲ್ಲ ಎಂದೆನಿಸುತ್ತದೆ !. ಸುರೇಶ್ ಗೌಡರ ‘ಸಿಎಂ ಬದಲಾವಣೆ’ ಹೇಳಿಕೆಗೂ ಮುಂದಿನ ಸಿಎಮ್ ನಿರಾಣಿ ಎಂಬ ಪೋಸ್ಟರ್’ಗೂ ಹಾಗೂ ಜನೋತ್ಸವದ ಮುಂದೂಡಿಕೆಗೂ ಸಂಬಂಧವಿದೆಯೇ ಎಂದು ಬಿಜೆಪಿಯನ್ನು ಖಾರವಾಗಿ ಪ್ರಶ್ನಿಸಿದೆ.

- Advertisement -

ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿ ಉತ್ಸವವನ್ನು ಕಂಡ ಮುಖ್ಯಮಂತ್ರಿ ಬೊಮ್ಮಾಯಿ ಅವರು ಜನೋತ್ಸವ ಮಾಡಲು ಹೆದರಿದ್ದಾರೆ! ಬಿಜೆಪಿಯೊಳಗೆ ‘ಕಲಹೋತ್ಸವ’ ನಡೆಯುತ್ತಿರುವಾಗ, ಬೊಮ್ಮಾಯಿಯವರು ‘ಆತಂಕೋತ್ಸವ’ಎದುರಿಸುತ್ತಿರುವಾಗ, ಸರ್ಕಾರದಲ್ಲಿ ಭ್ರಷ್ಟೋತ್ಸವ ನಡೆಯುತ್ತಿರುವಾಗ, ಜನರು ಬರುವುದುಂಟೇ, ಜನೋತ್ಸವ ನಡೆಯುವುದುಂಟೇ! ಎಂದು ಕಾಂಗ್ರೆಸ್ ಕುಟುಕಿದೆ.

Join Whatsapp