ಬಲವಾದ ಹಿಂದುತ್ವ ನಿಲುವು ಹೊಂದಿರುವ ಬಿಜೆಪಿಯೊಂದಿಗೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಮಾಯಾವತಿ ಹೇಳಿಕೆ ನೀಡಿದ್ದಾರೆ.
“ಬಿಜೆಪಿ ಮತ್ತು ಬಿಎಸ್ಪಿ ಒಟ್ಟಾಗಿ ನಿಲ್ಲಲು ಸಾಧ್ಯವಿಲ್ಲ. ಅಂತಹಾ ಕೋಮು ಪಕ್ಷಗಳೊಂದಿಗೆ ಬಿಎಸ್ಪಿ ಗೆ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಮಾಯಾವತಿ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ತನ್ನ ಮಾತುಗಳನ್ನು ತಿರುಚುತ್ತಿವೆ. ಆ ಮೂಲಕ ಮುಸ್ಲಿಮರನ್ನು ತಮ್ಮಿಂದ ದೂರವಿಡುವ ಗುರಿಯನ್ನು ಹೊಂದಿವೆ ಎಂದು ಮಾಯಾವತಿ ಹೇಳಿದ್ದಾರೆ.
ಸಮಾಜವಾದಿ ಪಕ್ಷವನ್ನು ಸೋಲಿಸಲು ಅಗತ್ಯ ಬಂದರೆ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವುದಾಗಿ ಮಾಯಾವತಿ ಈ ಹಿಂದೆ ಹೇಳಿದ್ದರು. ಕೋಮುವಾದ, ಜಾತಿವಾದ ಮತ್ತು ಬಂಡವಾಳಶಾಹಿಗಳ ಹಿಡಿತದಲ್ಲಿರುವ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ರಾಜಕೀಯದಿಂದ ನಿವೃತ್ತಿಯಾಗುವುದು ಉತ್ತಮ ಎಂಬುದು ಬಿಎಸ್ಪಿ ಅಧ್ಯಕ್ಷರ ಹೇಳಿಕೆ.