Home Uncategorized ಬಂಟ್ವಾಳ ಇನ್ಸ್ ಪೆಕ್ಟರ್ ಸೇರಿ 65 ಮಂದಿ ಅಧಿಕಾರಿಗಳ ವರ್ಗಾವಣೆ

ಬಂಟ್ವಾಳ ಇನ್ಸ್ ಪೆಕ್ಟರ್ ಸೇರಿ 65 ಮಂದಿ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು; ಬಂಟ್ವಾಳ ಇನ್ಸ್ ಪೆಕ್ಟರ್ ನಾಗರಾಜ್ ಟಿ.ಡಿ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 65 ಮಂದಿ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ತಕ್ಷಣವೇ ಜಾರಿಗೆ ಬರುವಂತೆ ಇನ್ಸ್‌ಪೆಕ್ಟರ್ ಗಳನ್ನು ವಿವಿಧ ಭಾಗಗಳಿಗೆ ವರ್ಗಾವಣೆ ಮಾಡಲಾಗಿದ್ದು, ಸಂಬಂಧಿಸಿದ ಘಟಕಾಧಿಕಾಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಗೊಳಿಸಿ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.

ಬಂಟ್ವಾಳ ವೃತ್ತದ ಇನ್ಸ್ ಪೆಕ್ಟರ್ ನಾಗರಾಜ್ ಟಿ.ಡಿ.ಅವರನ್ನು ಮೇಲ್ದರ್ಜೆಗೇರಿಸಲಾದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಪಿ.ಜಿ.ಮಧುಕರ್ (ಬೆಂಗಳೂರು ಎಟಿಸಿ), ಶಿವಾನಂದ್ ಬೇವೂರು (ಲೋಕಾಯುಕ್ತ), ಶಿಲ್ಪಾ (ಸಿಐಡಿ), ವೀರಭದ್ರಯ್ಯ ಹೀರೆಮಠ್ (ಲೋಕಾಯುಕ್ತ), ದಯಾನಂದ್ ಶೆಗುಣಿಸಿ (ಐಎಸ್‌ಡಿ), ಜಾವೆದ್ ಮುಸಾಪುರಿ(ಎಸಿಬಿ), ಬಸವರಾಜು ಬಿ(ಲೋಕಾಯುಕ್ತ), ರಂಗಸ್ವಾಮಿ ವೈಆರ್ (ರಾಜ್ಯ ಗುಪ್ತವಾರ್ತೆ), ಎಲ್.ದೀಪಕ್ (ಗಿರಿನಗರ ಠಾಣೆ), ಜಿ.ಗುರುಪ್ರಸಾದ್(ಜಯನಗರ ಸಂಚಾರ ಠಾಣೆ), ವಿ.ಮಡಿವಾಳ ಚಿದಂಬರ(ಎಸಿಬಿ), ಕೆ.ರಾಜೇಂದ್ರ(ಲೋಕಾಯುಕ್ತ), ಬಸವರಾಜ್ ಜಿ.ಪುಲಾರಿ (ಎಸಿಬಿ) ಸೇರಿ 65 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

Join Whatsapp
Exit mobile version