ಪಾಟ್ನಾ: ಪ್ರತಿಪಕ್ಷಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳನ್ನು ಮತ್ತೆ ನೀಡಬೇಕೆಂದು ಬಯಸುತ್ತಿವೆ ಎಂದು ಬಿಹಾರ ಚುನಾವಣಾ ಪ್ರಚಾರದಲ್ಲಿ ಮೋದಿ ಹೇಳಿದ್ದಾರೆ. ಎಲ್ಲರೂ 370ನೇ ವಿಧಿಯನ್ನು ರದ್ದುಗೊಳಿಸಲು ಕಾಯುತ್ತಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬಂದರೆ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು.
ಇಂತಹಾ ಹೇಳಿಕೆಗಳನ್ನು ನೀಡಿ ಬಿಹಾರದಲ್ಲಿ ಅವರಿಗೆ ಮತಗಳನ್ನು ಕೇಳಲು ಧೈರ್ಯ ಇದೆಯೇ? ಇದು ಬಿಹಾರಿಗಳಿಗೆ ಅವಮಾನವಲ್ಲವೇ? ದೇಶವನ್ನು ರಕ್ಷಿಸಲು ಮಕ್ಕಳನ್ನು ಗಡಿ ಪ್ರದೇಶಕ್ಕೆ ಕಳುಹಿಸುವ ರಾಜ್ಯಕ್ಕೆ ಮಾಡಿದ ಅವಮಾನವಲ್ಲವೇ? ಎಂದು ಮೋದಿ ಹೇಳಿದರು.
ಈ ಹಿಂದೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ರಾಮ ಮಂದಿರ ದರ್ಶನಕ್ಕೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದರು. ನಾವು ಪಾಕಿಸ್ಥಾನಕ್ಕೆ ಪ್ರವೇಶಿಸಿ ಭಯೋತ್ಪಾದಕರನ್ನು ಕೊಂದಿದ್ದೇವೆ ಎಂದು ಯೋಗಿ ಈ ಹಿಂದೆ ಬಿಹಾರ ಚುನಾವಣಾ ಪ್ರಚಾರದಲ್ಲಿ ತಿಳಿಸಿದ್ದರು.