Home ಕರಾವಳಿ ಪೊಲೀಸರಿಂದಲೇ ಆರೋಪಿಗಳ ಕಾರು ಮಾರಾಟದ ಆರೋಪ | ಸಿಐಡಿ ತನಿಖೆ ಆರಂಭ

ಪೊಲೀಸರಿಂದಲೇ ಆರೋಪಿಗಳ ಕಾರು ಮಾರಾಟದ ಆರೋಪ | ಸಿಐಡಿ ತನಿಖೆ ಆರಂಭ

ಮಂಗಳೂರು: ಪ್ರಕರಣವೊಂದರ ಆರೋಪಿಗಳಿಗೆ ಸೇರಿದ ಕಾರನ್ನು ಸಿಸಿಬಿ (ನಗರ ಅಪರಾಧ ಪತ್ತೆದಳ) ಪೊಲೀಸರು ಮಾರಾಟ ಮಾಡಿದ್ದಾರೆನ್ನಲಾದ ಪ್ರಕರಣದ ತನಿಖೆಗಾಗಿ ಸಿಐಡಿ ತಂಡ ಮಂಗಳೂರಿಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.

ಸಿಐಡಿ ಎಸ್‌ಪಿ ರೋಹಿಣಿ ಕಟ್ಟೋಚ್‌ ಅವರ ನೇತೃತ್ವದ ತಂಡ ತನಿಖೆ ಆರಂಭಿಸಿದ್ದು, ಸಿಐಡಿ ಡಿಜಿಗೆ ವರದಿ ಸಲ್ಲಿಸಲಿದ ನಂತರ ಅದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸಲ್ಲಿಕೆಯಾಗಲಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೊಲೀಸ್‌ ಅಧಿಕಾರಿ ಹಾಗೂ ಸಿಬಂದಿಗೆ ಈಗಾಗಲೆ ನೋಟಿಸ್‌ ನೀಡಲಾಗಿದೆ. ಪ್ರಾಥಮಿಕ ಹಂತದ ತನಿಖೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್‌ ಗಾಂವ್ಕರ್‌ ಅವರು ನಡೆಸಿದ್ದು, ಅದರ ವರದಿಯನ್ನು ಕಮಿಷನರ್‌ಗೆ ಸಲ್ಲಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅಪರಾಧ ಪತ್ತೆದಳ ಹಿಂದಿನ ಎಸ್‌ಐ ಕಬ್ಬಳ್‌ರಾಜ್‌, ಸಿಸಿಬಿಯ ಆಶಿತ್‌, ರಾಜ ಹಾಗೂ ನಾರ್ಕೊಟಿಕ್‌ ಆಯಂಡ್‌ ಎಕನಾಮಿಕ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಅವರ ಹೆಸರು ಹಾಗೂ ಬ್ರೋಕರ್‌ ದಿವ್ಯದರ್ಶನ್‌ ಹೆಸರನ್ನು ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ. 

Join Whatsapp
Exit mobile version