ಪತ್ರಕರ್ತ ಮಂದೀಪ್ ಪುನಿಯಾ ಬಿಡುಗಡೆಗೆ ಆಗ್ರಹಿಸಿ ಟ್ವಿಟ್ಟರ್ ಅಭಿಯಾನ

Prasthutha|

ರೈತರ ಪ್ರತಿಭಟನೆ ವೇಳೆ ಸಿಂಘು ಗಡಿಯಲ್ಲಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಹವ್ಯಾಸಿ ಪತ್ರಕರ್ತ ಮಂದೀಪ್ ಪುನಿಯಾ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭಾನುವಾರ ಟ್ವಿಟ್ಟರ್ ಅಭಿಯಾನ ನಡೆಸಲಾಗಿದೆ.
ಘಟನೆ ನಡೆದಾಗ ಪುನಿಯಾ ರಸ್ತೆ ತಡೆ ಮತ್ತು ಬ್ಯಾರಿಕೇಡ್‌ಗಳನ್ನು ಹಾರಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಮಂದೀಪ್ ಪುನಿಯಾ ಅವರನ್ನು ದೆಹಲಿ ಪೊಲೀಸರು ಏಕೆ ಬಂಧಿಸಿದ್ದಾರೆ. ಅವರು ಪ್ರತಿಭಟನಾ ಸ್ಥಳದಿಂದ ನೇರ ವರದಿ ಮಾಡುತ್ತಿದ್ದರು. ತಕ್ಷಣ ಪುನಿಯಾ ಅವರನ್ನು ಬಿಡುಗಡೆ ಮಾಡಿ ಎಂದು ದಿನೇಶ್ ಚೌಹಾಣ್ ಎಂಬವರು ಟ್ವೀಟ್ ಮಾಡಿದ್ದಾರೆ.
ಮಂದೀಪ್ ವಿರುದ್ಧ ಸೆಕ್ಷನ್ 186 ಐಪಿಸಿ (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಾಗ ಸರ್ಕಾರಿ ಅಧಿಕಾರಿಗಳಿಗೆ ಅಡ್ಡಿಪಡಿಸುವುದು) ಮತ್ತು 353 ಐಪಿಸಿ ಸೆಕ್ಷನ್ (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಣೆಯಿಂದ ತಡೆಯುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದಿ ಕಾರವಾನ್ ಸೇರಿದಂತೆ ಹಲವು ನಿಯತಕಾಲಿಕಗಳಿಗೆ ಪುನಿಯಾ ಕೆಲಸ ಮಾಡುತ್ತಿದ್ದಾರೆ.
ಶಿವಸೇನೆ ನಾಯಕ ಮತ್ತು ನಟ ಊರ್ಮಿಳಾ ಮಾತೋಂಡ್ಕರ್ ಸೇರಿದಂತೆ ಹಲವರು ಪುನಿಯಾ ಪರ ಟ್ವಿಟ್ಟರ್ ನಲ್ಲಿ ಧ್ವನಿ ಎತ್ತಿದ್ದಾರೆ.

Join Whatsapp
Exit mobile version