‘ನ್ಯಾಯದ ಪರ ಹೋರಾಟದಲ್ಲಿ ನಾವು ಮಕ್ಕಳೊಂದಿಗೆ ನಿಲ್ಲಬೇಕು’: ದಿಶಾ ರವಿ ತಾಯಿ ಹೇಳಿಕೆ

Prasthutha|

- Advertisement -

ಬೆಂಗಳೂರು : ‘ನಮ್ಮ ಮಕ್ಕಳು ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವಾಗ ಅವರೊಂದಿಗೆ ನಿಲ್ಲಬೇಕು. ಇದು ಯಾರಿಗೂ ಕಷ್ಟದ ವಿಷಯ. ಆದರೆ ನಮ್ಮ ಮಕ್ಕಳು ಯಾವುದೇ ತಪ್ಪು ಮಾಡದಿದ್ದರೆ, ನಾವು ಯಾಕೆ ಭಯಪಡಬೇಕು? ‘ ಟೂಲ್‌ಕಿಟ್ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಜಾಮೀನು ಪಡೆದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ತಾಯಿ ಮಂಜುಳ ನಂಜಯ್ಯ ಅವರ ಪ್ರತಿಕ್ರಿಯೆ ಇದಾಗಿದೆ.

‘ಅವಳು ಮನೆಗೆ ಬಂದಾಗ ಅವಳನ್ನು ತಬ್ಬಿಕೊಳ್ಳಲು ನಾನು ಕಾಯುತ್ತಿದ್ದೇನೆ’ ಎಂದು ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡುವಾಗ ಮಂಜುಳ ಹೇಳಿದ್ದಾರೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಟೂಲ್‌ಕಿಟ್ ತಯಾರಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬೆಂಗಳೂರಿನ ದಿಶಾ (22) ಅವರನ್ನು ಫೆಬ್ರವರಿ 14 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಸಹಾಯ ಮಾಡಿದ ಎಲ್ಲರಿಗೂ, ವಿಶೇಷವಾಗಿ ಅವಳೊಂದಿಗೆ ಇದ್ದ ಕಾನೂನು ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ನಮ್ಮ ಮಗಳು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ, ಅವಳು ಜಾಮೀನು ಪಡೆಯುವುದು ನಮಗೆ ಖಚಿತವಾಗಿತ್ತು’ ಎಂದು ಮಂಜುಳ ಹೇಳಿದ್ದಾರೆ.

- Advertisement -

ಅಥ್ಲೆಟಿಕ್ಸ್ ತರಬೇತುದಾರ ದಿಶಾ ತಂದೆ ರವಿ ಅನ್ನಪ್ಪ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಮಗಳ ಬಂಧನದ ನಂತರ ಮಂಜುಳಾ ಅವರೊಂದಿಗೆ ಇದ್ದಾರೆ. ದಿಶಾ ವಿರುದ್ಧದ ಆರೋಪಗಳ ಬಗ್ಗೆ ಕೇಳಿದಾಗ, ‘ಸತ್ಯ ಯಾವಾಗಲೂ ಗೆಲ್ಲುತ್ತದೆ. ನನ್ನ ಮಗಳು ಯಾವುದೇ ತಪ್ಪು ಮಾಡದಿದ್ದಾಗ ನಾವು ಯಾಕೆ ಭಯಪಡಬೇಕು? ಅವಳು ರೈತರನ್ನು ಬೆಂಬಲಿಸಿ ಸಮಾಜಕ್ಕೆ ಒಳ್ಳೆಯದನ್ನು ಮಾಡಲು ಹೊರಟಿದ್ದಾಳೆ ‘ಎಂದು ಮಂಜುಳ ಹೇಳಿದ್ದಾರೆ.

Join Whatsapp