Home ಟಾಪ್ ಸುದ್ದಿಗಳು ನೌಕಾ ವಿಮಾನ ದುರಂತ: ಕೊನೆಗೂ ಪತ್ತೆಯಾದ ಪೈಲಟ್ ಮೃತದೇಹ

ನೌಕಾ ವಿಮಾನ ದುರಂತ: ಕೊನೆಗೂ ಪತ್ತೆಯಾದ ಪೈಲಟ್ ಮೃತದೇಹ

ನವೆಂಬರ್ 26ರಂದು ಪತನಗೊಂಡಿದ್ದ ಮಿಗ್-29ಕೆ ನೌಕಾ ವಿಮಾನದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಮೃತದೇಹ ಕೊನೆಗೂ ಪತ್ತೆಯಾಗಿದೆ.

ನವೆಂಬರ್ 26ರಂದು ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಹಾರಿದ್ದ ಮಿಗ್ ವಿಮಾನ ಸಂಜೆ 5 ಗಂಟೆಯ ಹೊತ್ತಿಗೆ ಅರಬ್ಬಿ ಸಮುದ್ರದ ಮೇಲ್ಭಾಗದಲ್ಲಿ ಪತನಗೊಂಡಿತ್ತು. ಇದೀಗ ಬರೋಬ್ಬರಿ 11 ದಿನಗಳ ದೀರ್ಘ ಶೋಧಕಾರ್ಯದ ನಂತರ ಗೋವಾ ಸಮುದ್ರ ತೀರದಿಂದ 30 ಕಿ.ಮೀ ದೂರದಲ್ಲಿ ನಿಶಾಂತ್ ಅವರ ಮೃತದೇಹ ಪತ್ತೆಯಾಗಿದೆ.

ನಿಶಾಂತ್ ಜೊತೆಗಿದ್ದ ಸಹ ಪೈಲಟ್ ವಿಮಾನ ಪತನಗೊಳ್ಳುವುದಕ್ಕೂ ಮುಂಚೆ ಸೂಚನೆ ಸಿಕ್ಕಿದ್ದರಿಂದ ಹೊರಗೆ ಹಾರಿದ್ದು, ಪ್ರಾಣಪಾಯದಿಂದ ಪಾರಾಗಿದ್ದರು.

Join Whatsapp
Exit mobile version