ಗುರುಗ್ರಾಮ್ (ರಾಜಸ್ತಾನ) : ಪ್ರವಾದಿ ಅವಹೇಳನಗೈದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ನಾಲಿಗೆ ಸೀಳಿದರೆ ₹ 2 ಕೋಟಿ ಬಹುಮಾನ ನೀಡುತ್ತೇನೆ ಎಂದು ಹೇಳಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.
“ಈ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಪತ್ತೆ ಹಚ್ಚುವುದರಲ್ಲಿ ನಾವು ಕಾರ್ಯನಿರತರಾಗಿದ್ದೇವೆ., ಇಂತಹ ಉದ್ವೇಗವುಳ್ಳ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಬೇಡಿ ಎಂದು ನಾವು ಜನರೊಂದಿಗೆ ಕೋರುತ್ತಿದ್ದೇವೆ” ಎಂದು ನುಹ್ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗ್ಲಾ ಹೇಳಿದ್ದಾರೆ.
“ನೂಪುರ್ ಶರ್ಮಾಳ ನಾಲಿಗೆಯನ್ನು ಸೀಳಿರಿ ಮತ್ತು ₹ 2 ಕೋಟಿ ಪಡೆದುಕೊಳ್ಳಿ. ಈಗಲೇ ಮಾಡಿ ಮತ್ತು ಈಗಲೇ ಹಣ ಪಡೆದುಕೊಳ್ಳಿ,” ಎಂದು ಒಬ್ಬ ವ್ಯಕ್ತಿಯು, ಒಬ್ಬ ಯುಟ್ಯೂಬರ್ ನೊಂದಿಗೆ ಹೇಳುತ್ತಿರುವುದು ಆ ವೀಡಿಯೊದಲ್ಲಿದೆ ಎಂದು ತಿಳಿದುಬಂದಿದೆ.