ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾಗೆ ಝಡ್ ಪ್ಲಸ್ ಭದ್ರತೆ ಒದಗಿಸುವ ಬಗೆ ಪತ್ರವನ್ನು ಬರೆದಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸತ್ಯ ಶೋಧಕ ಜಾಲತಾಣ ‘ಬೂಮ್’ ಬಹಿರಂಗಪಡಿಸಿದೆ.
ಕಳೆದ ವರ್ಷ ಅಮಿತ್ ಶಾ, ಕೊರೋನಾವನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ್ದಾರೆ ಎಂಬ ನಕಲಿ ಪತ್ರವು ವೈರಲ್ ಆಗಿತ್ತು. ಜೂನ್ 4, 2021 ರ ನಕಲಿ ಪತ್ರವನ್ನು ಈಗ ವೈರಲ್ ಆಗುತ್ತಿರುವ ನಕಲಿ ಪತ್ರದೊಂದಿಗೆ ಹೋಲಿಸಿದಾಗ, ಎರಡೂ ಪತ್ರಗಳಲ್ಲಿ ಉಲ್ಲೇಖಿಸಲಾದ ‘HMP ಸಂಖ್ಯೆ – 28647021’ ಒಂದೇ ಆಗಿರುವುದನ್ನು ಬೂಮ್ ಕಂಡುಕೊಂಡಿದ್ದು, ಇದು ಸುಳ್ಳು ಎಂದು ಹೇಳಿದೆ.