ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟಿಷ್ ನ್ಯಾಯಾಲಯ ಆದೇಶ

Prasthutha|

ನವದೆಹಲಿ: ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಿಂದ ಭಾರತದಿಂದ ಪರಾರಿಯಾಗಿ ಬ್ರಿಟನ್ ನಲ್ಲಿ ನೆಲೆಸಿರುವ ನೀರವ್ ಮೋದಿಯನ್ನು ಮತ್ತೆ ಭಾರತಕ್ಕೆ ಗಡಿಪಾರು ಮಾಡುವಂತೆ ಬ್ರಿಟನ್ ಹೈಕೋರ್ಟ್ ಬುಧವಾರ ಆದೇಶಿಸಿದೆ.

- Advertisement -

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ)ಗೆ 13,000 ಕೋಟಿ ರೂ.ಗಳ ವಂಚನೆಯ ಹಗರಣದಲ್ಲಿ 51 ವರ್ಷದ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಪಿಎನ್ ಬಿ ಹಗರಣವನ್ನು ಬಯಲಿಗೆಳೆದು ಇದರ ತನಿಖೆ ಪ್ರಾರಂಭವಾದಾಗ ನೀರವ್ ಭಾರತದಿಂದ ಪಲಾಯನ ಮಾಡಿದ್ದರು.

ಭಾರತಕ್ಕೆ ಗಡಿಪಾರು ಮಾಡುವ ವಿರುದ್ಧ ನೀರವ್ ಮೋದಿ ಬ್ರಿಟನ್ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಮಾನಸಿಕ ಅಸ್ವಸ್ಥತೆ ಸೇರಿ ಹಲವು ಕಾರಣಗಳಿಂದಾಗಿ ಮನವಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಆದರೆ ಗಡಿಪಾರು ಮಾಡುವುದು “ಅನ್ಯಾಯ ಅಥವಾ ದಬ್ಬಾಳಿಕೆ” ಅಲ್ಲ ಎಂದು ರಾಯಲ್ ಕೋರ್ಟ್ ಆಫ್ ಜಸ್ಟೀಸ್ ಅಭಿಪ್ರಾಯಪಟ್ಟಿದ್ದು, ನೀರವ್‌ ಮನವಿಯನ್ನು ತಿರಸ್ಕರಿಸಿದೆ.

Join Whatsapp