Home ಟಾಪ್ ಸುದ್ದಿಗಳು ನಿಖಿಲ್ ಕುಮಾರಸ್ವಾಮಿ ಸೋಲು: ಇಕ್ಬಾಲ್ ಹುಸೇನ್ ಗೆಲುವು

ನಿಖಿಲ್ ಕುಮಾರಸ್ವಾಮಿ ಸೋಲು: ಇಕ್ಬಾಲ್ ಹುಸೇನ್ ಗೆಲುವು

ಜೆಡಿಎಸ್ ಭದ್ರಕೋಟೆ ಎಂದು ಕರೆಯಲ್ಪಡುವ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಲ್ ಕುಮಾರಸ್ವಾಮಿ ಸೋಲನ್ನು ಕಂಡಿದ್ದಾರೆ.

ರಾಮನಗರದಲ್ಲಿ ಇದುವರೆಗೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬ ರಾಜಕೀಯವಾಗಿ ಬೇರೂರಿತ್ತು. ಹೀಗಾಗಿನೇ ರಾಮನಗರ ಕ್ಷೇತ್ರವನ್ನು ದೇವೇಗೌಡರ ಕುಟುಂಬದ ಭದ್ರಕೋಟೆ ಎಂದು ಕರೆಯಲಾಗುತ್ತಿತ್ತು. ಈ ಹಿಂದೆ ಗೌಡ್ರು ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಳಿಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಇದೇ ಕ್ಷೇತ್ರದಿಂದ ಜಯಗಳಿಸಿದ್ದರು.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಾರೆ.

Join Whatsapp
Exit mobile version