ನಮಸ್ತೇ ಟ್ರಂಪ್; ಅಹಮದಾಬಾದ್ ಮಹಾನಗರ ಪಾಲಿಕೆಗೆ 9 ಕೋಟಿ ನಷ್ಟ

Prasthutha|

- Advertisement -

ಅಹಮದಾಬಾದ್: ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಕೇವಲ ಮೂರು ಗಂಟೆಗಳ ಕಾಲ ಭಾಗವಹಿಸಿದ್ದ ‘ನಮಸ್ತೇ ಟ್ರಂಪ್’ ಎಂಬ ಕಾರ್ಯಕ್ರಮಕ್ಕೆ ಅಹಮದಾಬಾದ್ ಮಹಾನಗರ ಪಾಲಿಕೆಯ ಖಜಾನೆಯಿಂದ ಬರೋಬ್ಬರಿ 9.1 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಲಾಗಿತ್ತು.

ರಸ್ತೆಗಳ ದುರಸ್ತಿಗಾಗಿ 7.86 ಕೋಟಿ ರೂ, ಕಾರ್ಯಕ್ರಮಕ್ಕೆ ಜನರನ್ನು ಸಾಗಿಸಲು ಬಸ್‌ಗೆ 72 ಲಕ್ಷ ರೂ., ನೀರು ವಿತರಿಸಲು 26.2 ಲಕ್ಷ ರೂ, ಮೊಟೆರಾ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಲು 6.49 ಲಕ್ಷ ರೂ, ಟ್ರಂಪ್ ಪ್ರಯಾಣಿಸುವ ರಸ್ತೆಯಲ್ಲಿದ್ದ ಎರಡು ಸೇತುವೆಗಳ ದುರಸ್ತಿ ಮತ್ತು ಪೈಂಟಿಂಗ್ ಗಾಗಿ 11 ಲಕ್ಷ ರೂ. ಖರ್ಚು ಮಾಡಲಾಗಿತ್ತು.

- Advertisement -

ಸಾಮಾಜಿಕ ಕಾರ್ಯಕರ್ತ ರಾಜ್ ಸಿಸೋಡಿಯಾ ಅವರಿಗೆ ಆರ್‌ಟಿಐ ನೀಡಿದ ಉತ್ತರವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಈ ವಿವರಗಳನ್ನು ವರದಿ ಮಾಡಿದೆ. ನಮಸ್ತೆ ಟ್ರಂಪ್‌ಗೆ 12.5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು 2020 ರ ಫೆಬ್ರವರಿ 29 ರಂದು ಗುಜರಾತ್ ಸರಕಾರ ರಾಜ್ಯ ವಿಧಾನಸಭೆಯಲ್ಲಿ ಹೇಳಿಕೆ ನೀಡಿತ್ತು. ಇದರಲ್ಲಿ 8 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಮತ್ತು 4.5 ಕೋಟಿ ರೂ.ಗಳನ್ನು ಮಹಾನಗರ ಪಾಲಿಕೆ ಖರ್ಚು ಮಾಡಿದೆ ಎಂದು ತಿಳಿಸಿತ್ತು.

ಕಾರ್ಯಕ್ರಮಕ್ಕೆ ಆಗಮಿಸುವ ಟ್ರಂಪ್‌ರ ಪ್ರಯಾಣದ ಮಾರ್ಗದಲ್ಲಿ ಸ್ಲಂ ಪ್ರದೇಶಗಳನ್ನು ಮುಚ್ಚುವ ಗುಜರಾತ್‌ ಸರಕಾರದ ನಿರ್ಧಾರವು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಸ್ಲಂಗಳನ್ನು ಮರೆಮಾಡಲು ಸರಕಾರ 400 ಮೀಟರ್ ಉದ್ದದ ಗೋಡೆಯನ್ನು ನಿರ್ಮಿಸಿತ್ತು.

Join Whatsapp