ಹೊಸದಿಲ್ಲಿ: ಜೈಲು ಅಧಿಕಾರಿಗಳು ತನ್ನನ್ನು ಯಾಕಾಗಿ ಹಲವು ದಿನಗಳಿಂದ ಏಕಾಂತ ಬಂಧನದಲ್ಲಿರಿಸಿದ್ದಾರೆ ಮತ್ತು ಯಾಕಾಗಿ ತನ್ನನ್ನು ಶಿಕ್ಷಿಸಲಾಗುತ್ತಿದೆ ಎಂದು ಜೆ.ಎನ್.ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ದಿಲ್ಲಿ ನ್ಯಾಯಾಲವನ್ನು ಪ್ರಶ್ನಿಸಿದ್ದಾರೆ.
“ನನಗೆ ಭದ್ರತೆಯ ಅಗತ್ಯವಿದೆ. ಹಾಗೆಂದು ಹೊರಗೆ ಹೆಜ್ಜೆಯೇ ಇಡದಂಥಹ ಭದ್ರತೆಯಲ್ಲ. ಇದು ಒಂದು ಶಿಕ್ಷೆಯಾಗಿದೆ. ನನಗೆ ಯಾಕಾಗಿ ಈ ಶಿಕ್ಷೆಯನ್ನು ನೀಡಲಾಗಿದೆ?” ಎಂದು ಅವರು ವಿಚಾರಣೆಯ ವೇಳೆ ನ್ಯಾಯಾಲಯವನ್ನು ಕೇಳಿದ್ದಾರೆ.
ಉತ್ತರ ದಿಲ್ಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಯು.ಎ.ಪಿ.ಎ ಹೇರಲ್ಪಟ್ಟಿರುವ ಸಹ ಆರೋಪಿ ಶಾರ್ಜೀಲ್ ಇಮಾಮ್ ರೊಂದಿಗೆ ಖಾಲಿದ್ ರನ್ನು ಹೆಚ್ಚುವರಿ ಸೆಶನ್ ನ್ಯಾಯಾಧೀಶ ಅಮಿತ್ ರಾವತ್ ಮುಂದೆ ಹಾಜರು ಪಡಿಸಲಾಗಿತ್ತು. ಬಳಿಕ ನ್ಯಾಯಲವು ಜೈಲು ಮೇಲ್ವಿಚಾರಕ ನನ್ನು ಶುಕ್ರವಾರದಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಕರೆ ಕಳುಹಿಸಿದೆ.