Home ಟಾಪ್ ಸುದ್ದಿಗಳು ಧೂಳು ನಿಯಂತ್ರಣ ನಿಯಮ ಉಲ್ಲಂಘನೆ: ವಾಣಿಜ್ಯ ಮಂಡಳಿಗೆ 20 ಲಕ್ಷ ದಂಡ ವಿಧಿಸಿದ ದಿಲ್ಲಿ ಸರಕಾರ

ಧೂಳು ನಿಯಂತ್ರಣ ನಿಯಮ ಉಲ್ಲಂಘನೆ: ವಾಣಿಜ್ಯ ಮಂಡಳಿಗೆ 20 ಲಕ್ಷ ದಂಡ ವಿಧಿಸಿದ ದಿಲ್ಲಿ ಸರಕಾರ

ಹೊಸದಿಲ್ಲಿ: ಧ್ವಂಸ ಸ್ಥಳದಲ್ಲಿ ಧೂಳು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಿಲ್ಲಿ ಸರಕಾರವು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ (ಎಫ್.ಐ.ಸಿ.ಸಿ.ಐ) ವಿರುದ್ಧ 20 ಲಕ್ಷ ರೂಪಾಯಿ ದಂಡ ವಿಧಿಸಿದೆ.

15 ದಿನಗಳೊಳಗಾಗಿ ಪರಿಸರ ಪರಿಹಾರವನ್ನು ಠೇವಣಿ ಮಾಡಬೇಕೆಂದು ವಾಣಿಜ್ಯ ಒಕ್ಕೂಟಕ್ಕೆ ದಿಲ್ಲಿ ಸರಕಾರ ಆದೇಶಿಸಿದೆ.

ಕಾಮಗಾರಿ ಸ್ಥಳಗಳಲ್ಲಿ ಹೊಗೆ ನಿಗ್ರಹ ಬಂದೂಕನ್ನು ಅಳವಡಿಸದೆ ಯಾವುದೇ ಧ್ವಂಸ ಚಟುವಟಿಕೆಗಳನ್ನು ಆರಂಭಿಸದಂತೆ ನಿರ್ದೇಶನಗಳನ್ನು ನೀಡಲಾಗಿದೆ.

ಧ್ವಂಸ ಸ್ಥಳದಲ್ಲಿ ಕೆಲಸವನ್ನು ನಿಲ್ಲಿಸುವಂತೆ ಈ ಹಿಂದೆ ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಎಫ್.ಐ.ಸಿ.ಸಿ.ಐಗೆ ಹೇಳಿತ್ತು.

Join Whatsapp
Exit mobile version