ದ್ವಿತೀಯ ಪಿಯುಸಿ ಫಲಿತಾಂಶ: ವಿಟ್ಲದ ಮೊಹಮ್ಮದ್ ಅನ್ಸಾಫ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Prasthutha|

ವಿಟ್ಲ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಅನ್ಸಾಫ್ 534 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾನೆ.

- Advertisement -

ಪ್ರಥಮ ಭಾಷೆ ಕನ್ನಡ, ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ 95, ಅಕೌಂಟೆನ್ಸಿ 94, ಬ್ಯುಸಿನೆಸ್ ಸ್ಟಡೀಸ್ 78, ಇಂಗ್ಲಿಷ್ ವಿಷಯದಲ್ಲಿ 77 ಅಂಕಗಳನ್ನು ಪಡೆದು ತೇರ್ಗಡೆಗೊಂಡಿದ್ದಾನೆ. ಈತ ಅಬ್ದುಲ್ ಹಮೀದ್ ಮತ್ತು ಅಸ್ಮಾ ದಂಪತಿಯ ಪುತ್ರನಾಗಿದ್ದಾನೆ.

Join Whatsapp
Exit mobile version