ಪಾಟ್ನಾ : ದೇಶವು ಹಣದುಬ್ಬರದಿಂದ ನಲುಗುತ್ತಿದ್ದು, ನಾವು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದೇವೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ತಿಳಿಸಿದ್ದಾರೆ
“ಹಣದುಬ್ಬರ ದೊಡ್ಡ ಸಮಸ್ಯೆಯಾಗಿದೆ. ದೇಶದಲ್ಲಿ ನಿರುದ್ಯೋಗ, ಹಸಿವು, ಬಡತನ ವ್ಯಾಪಕವಾಗಿದೆ. ಸಣ್ಣ ವ್ಯಾಪಾರಿಗಳು ನಾಶವಾಗುತ್ತಿದ್ದಾರೆ. ಜಿಡಿಪಿ ಕುಸಿಯುತ್ತಿದೆ’’ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಈರುಳ್ಳಿ ಬೆಲೆ 50-60 ರೂ. ಏರಿಕೆಯಾದಾಗ ಬಿಜೆಪಿಯವರು ಮಾತನಾಡುತ್ತಿದ್ದರು. ಈಗ ಕೆ.ಜಿ.ಗೆ 80 ರೂ. ದಾಟಿದೆ. ಆದರೂ ಅವರು ಮೌನವಾಗಿದ್ದಾರೆ. ರೈತರು ನಾಶವಾಗುತ್ತಿದ್ದಾರೆ.
ಯುವಕರು ನಿರುದ್ಯೋಗಿಗಳಾಗಿದ್ದಾರೆ. ರೈತರು ನಾಶವಾಗುತ್ತಿದ್ದಾರೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಶಿಕ್ಷಣ, ಉದ್ಯೋಗ, ವೈದ್ಯಕೀಯ ಸಹಾಯಕ್ಕಾಗಿ ಜನರು ವಲಸೆ ಹೋಗುತ್ತಿದ್ದಾರೆ’’ ಎಂದು ಕೇಂದ್ರ ಹಾಗೂ ಬಿಹಾರ ಸರಕಾರಗಳ ವಿರುದ್ಧ ತೇಜಸ್ವಿ ಯಾದವ್ ಹೇಳಿದ್ದಾರೆ.