ದಲಿತ ರೈತನಿಗೆ ಕ್ರೂರವಾಗಿ ಥಳಿಸಿ ಕಾಲಿಗೆ ಬಿದ್ದು ಕ್ಷಮೆ ಕೇಳಿಸಿದ ಸವರ್ಣೀಯರು

Prasthutha|

ಚೆನ್ನೈ : ದಲಿತ ರೈತನೊಬ್ಬನನ್ನು ಸವರ್ಣೀಯರು ಕ್ರೂರವಾಗಿ ಥಳಿಸಿ ಕಾಲಿಗೆ ಬಿದ್ದು ಕ್ಷಮೆ ಯಾಚಿಸುವಂತೆ ಬಲವಂತಪಡಿಸಿರುವುದು ವರದಿಯಾಗಿದೆ. ರೈತನ ಆಡುಗಳು ಮೇಲ್ಜಾತಿಯವರ ಹೊಲಕ್ಕೆ ಪ್ರವೇಶಿಸಿರುವುದಕ್ಕೆ ಈ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ದೃಶ್ಯಗಳು ಬಹಿರಂಗಗೊಂಡಾಗ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

- Advertisement -


ಗಂಟೆಗಳ ಕಾಲ ಚಿತ್ರಹಿಂಸೆ ಅನುಭವಿಸಿದ ನಂತರ ರೈತ ಪೌಲ್ ರಾಜ್ ಸವರ್ಣೀಯರ ಪಾದಕ್ಕೆ ಬಿದ್ದು ಕ್ಷಮೆಯಾಚಿಸಿದ್ದಾರೆ. ಪೌಲ್ ರಾಜ್ ಅವರ ಆಡುಗಳು ದಾರಿತಪ್ಪಿ ಸವರ್ಣೀಯರ ಭೂಮಿಗೆ ಬಂದಿದ್ದರಿಂದ ನಾಲ್ಕು ಆಡುಗಳನ್ನು ಅಪಹರಿಸಿದ ಥೇವರ್ ಸಮುದಾಯದವರು ಪೌಲ್ ರಾಜ್ ನನ್ನು ಕರೆದು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.


ತೂತುಕುಡಿ ಕಾಯತ್ತರ್ ನ ಒಲೈಕುಳಂ ಗ್ರಾಮದ ಥೇವರ್ ಸಮುದಾಯದವರು ಗುಂಪುಗಳಾಗಿ ಬಂದು ಥಳಿಸಿದ್ಧಾರೆ. ಪೌಲ್ ರಾಜ್ ನನ್ನು ಥಳಿಸಿದ ನಂತರ ಬಲವಂತವಾಗಿ ಸಮುದಾಯದ ಮುಖಂಡನ ಪಾದಕ್ಕೆ ಬಿದ್ದು ಹಲವಾರು ಬಾರಿ ಕ್ಷಮೆ ಕೇಳಿಸಿದ್ದಾರೆ. ಈ ದೃಶ್ಯಗಳನ್ನು ಥೇವರ್ ಸಮುದಾಯದ ಸದಸ್ಯರೇ ಚಿತ್ರೀಕರಿಸಿ ಪ್ರಸಾರ ಮಾಡಿದ್ದರು. ಮೇಲ್ಜಾತಿಯವರ ಭೂಮಿಗೆ ಪ್ರವೇಶಿಸಿದರೆ ಇದೇ ಗತಿ ಬರಬಹುದು ಎಂದು ಆ ದೃಶ್ಯವನ್ನು ಪ್ರಚಾರ ಮಾಡಿದ್ದರು.

Join Whatsapp