Home ಟಾಪ್ ಸುದ್ದಿಗಳು ದಲಿತ ಬಾಲಕಿಯರ ನಿಗೂಢ ಸಾವು| ಭೇಟಿ ಬಚಾವೋ ಬಿಜೆಪಿಯ ಎಚ್ಚರಿಕೆಯ ಘೋಷಣೆಯೇ? : ಕಾಂಗ್ರೆಸ್

ದಲಿತ ಬಾಲಕಿಯರ ನಿಗೂಢ ಸಾವು| ಭೇಟಿ ಬಚಾವೋ ಬಿಜೆಪಿಯ ಎಚ್ಚರಿಕೆಯ ಘೋಷಣೆಯೇ? : ಕಾಂಗ್ರೆಸ್

ಹೊಸದಿಲ್ಲಿ : ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಹೊಲವೊಂದರಲ್ಲಿ ಬುಧವಾರ ಇಬ್ಬರು ದಲಿತ ಬಾಲಕಿಯರು ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೊಬ್ಬ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿದ ಕಾಂಗ್ರೆಸ್ ನ ಅಲ್ಕಾ ಲಾಂಬಾ, ಬಿಜೆಪಿಯ ‘ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷಣೆಯು ರಾಜ್ಯದಲ್ಲಿ ಅಪರಾಧಗಳಿಂದ ಬಾಲಕಿಯರನ್ನು ರಕ್ಷಿಸುವ ಎಚ್ಚರಿಕೆಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಲ್ಕಾ ಲಾಂಬಾ, ‘ಹತ್ರಾಸ್ ಘಟನೆಯ ನಂತರ ಈಗ ಉನ್ನಾವೋದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಉತ್ತರಪ್ರದೇಶದ ಯೋಗಿ ಸರ್ಕಾರವು ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಶಾಪವಾಗಿ ಪರಿಣಮಿಸಿದೆ’ ಎಂದು ಲಾಂಬಾ ಹೇಳಿದ್ದಾರೆ.

‘ಅಪರಾಧಿಗಳು ಮುಕ್ತವಾಗಿ ಸುತ್ತಾಡುತ್ತಿದ್ದರೆ ಸಂತ್ರಸ್ತರ ಕುಟುಂಬ ಸದಸ್ಯರನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಉತ್ತರ ಪ್ರದೇಶವು ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಅಪರಾಧಗಳ ಕೇಂದ್ರವಾಗಿದೆ’. ಆದರೆ ಬಿಜೆಪಿ ನಾಯಕಿ ಮತ್ತು ಸಂಸದೆ ಸ್ಮೃತಿ ಇರಾನಿ ಅವರು ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಲಾಂಬಾ ಪ್ರಶ್ನಿಸಿದ್ದಾರೆ.
‘ಸ್ಮೃತಿ ಇರಾನಿ ಮೌನಕ್ಕೆ ಕಾರಣವೇನು? ಇದು ದ್ವಿಮುಖ ಸರ್ಕಾರ, ಹೆಣ್ಣುಮಕ್ಕಳಿಗೆ ಭದ್ರತೆ ಮತ್ತು ನ್ಯಾಯ ಏಕೆ ಇಲ್ಲ’ ಎಂದು ಅಲ್ಕಾ ಲಾಂಬಾ ಪ್ರಶ್ನಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಏಮ್ಸ್ ದಿಲ್ಲಿಗೆ ಏಕೆ ಇನ್ನೂ ವರ್ಗಾಯಿಸಿಲ್ಲ ಎಂದು ಲಾಂಬಾ ಪ್ರಶ್ನಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ಅಪರಾಧಿ ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಹೇಳಿದ್ದಾರೆ.

Join Whatsapp
Exit mobile version