ಬೆಂಗಳೂರು: ಕನ್ನಡ ಸಾಹಿತ್ಯಪರಿಷತ್ ಪಂಪ ಮಹಾಕವಿ ರಸ್ತೆಯ ಹೆಸರು ಬದಲಾವಣೆ ಮಾಡಲು ಚಿಂತನೆ ನಡೆಸಿದ್ದು, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ವಿಚಾರವನ್ನು ಕೈಬಿಟ್ಟಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ, ಪಂಪ್ ಕವಿಯ ಹೆಸರು ಬದವಾವಣೆ ಮಾಡಲು ಕಸಾಪ ಮುಂದಾಗಿಲ್ಲ, ಆ ಬಗ್ಗೆ ಹಲವು ಸಲಹೆಗಳು ಬಂದಿತ್ತು. ಆದರೆ ಯಾವುದೇ ಕಾರಣಕ್ಕೂ ಪಂಪ ಮಹಾ ಕವಿ ರಸ್ತೆ ಎಂಬ ಹೆಸರನ್ನು ಪರಿಷತ್ತು ಬದಲಾಯಿಸಲ್ಲ ಎಂದು ಹೇಳಿದ್ದಾರೆ.
ಕಸಾಪ, ಮಹಾಕವಿ ಪಂಪ ರಸ್ತೆ ಹೆಸರು ಬದಲಾಯಿಸಿ ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಅಂತಾ ಮರುನಾಮಕರಣಕ್ಕೆ ಮುಂದಾಗಿತ್ತು. ಈ ವಿಚಾರ ಕೇಳಿ ಬರುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವಿರೋಧ ಭುಗಿಲೆದ್ದಿದೆ. ಸಾಹಿತಿಗಳು, ಪ್ರಗತಿಪರ ಸಂಘಟನೆಗಳು, ಜೈನ ಸಮುದಾಯದಿಂದ ತೀವ್ರ ವಿರೋಧದ ಬೆನ್ನಲೆ ಮಹಾಕವಿ ಪಂಪನ ಹೆಸರು ಬದಲಾವಣೆ ಮಾಡುವ ಯೋಚನೆಯನ್ನು ಕೈ ಚೆಲ್ಲಿದೆ.