Home ಟಾಪ್ ಸುದ್ದಿಗಳು ತಮಿಳುನಾಡು | ಸಂಸದ ತಿರುಮಾವಲವನ್ ರ ‘ಮನುಧರ್ಮ’ ಹೇಳಿಕೆಯ ವೀಡಿಯೊ ವೈರಲ್

ತಮಿಳುನಾಡು | ಸಂಸದ ತಿರುಮಾವಲವನ್ ರ ‘ಮನುಧರ್ಮ’ ಹೇಳಿಕೆಯ ವೀಡಿಯೊ ವೈರಲ್

ಚೆನ್ನೈ : ಮಹಿಳೆ ಮತ್ತು ಮನುಧರ್ಮದ ಕುರಿತಂತೆ ತಮಿಳುನಾಡು ಸಂಸದ, ವಿಡುದಲೈ ಚಿರುಥೈಗಳ್ ಕಚ್ಚಿ ಸಂಸ್ಥಾಪಕ ಥೋಳ್ ತಿರುಮಾವಲವನ್ ರ ಹೇಳಿಕೆಯ ಹಳೆಯ ವೀಡಿಯೊವೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೊ ವೈರಲ್ ಆಗಿದ್ದು, ಇದರ ವಿರುದ್ಧ ಬಿಜೆಪಿ ಬೆಂಬಲಿಗರು ಆಕ್ರೋಶಿತರಾಗಿದ್ದಾರೆ

ಕಳೆದ ತಿಂಗಳು ತಿರುಮಾವಲವನ್ ಮಾಡಿರುವ ಆನ್ ಲೈನ್ ಭಾಷಣದ ತುಣುಕನ್ನು ಈ ವೀಡಿಯೊ ಒಳಗೊಂಡಿದೆ. ಆನ್ ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, “ಮನುಧರ್ಮದ ಪ್ರಕಾರ, ಎಲ್ಲಾ ಮಹಿಳೆಯರನ್ನು ದೇವರು ವೇಶ್ಯೆಯರಾಗಿ ಸೃಷ್ಟಿಸಿದ್ದಾನೆ ಮತ್ತು ಹೀಗಾಗಿ ಸನಾತನ ಧರ್ಮ ಅವರಿಗೆ ಪುರುಷರಿಗಿಂತ ಕೆಳ ದರ್ಜೆಯ ಸ್ಥಾನವನ್ನು ನೀಡಿದೆ” ಎಂದು ಹೇಳಿದ್ದರು.

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸುತ್ತಿದ್ದಂತೆ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕೀಯ ನಾಯಕರಾಗಿ, ತಾವು ಮಾತನಾಡುವಾಗ ಜಾಗೃತೆಯಿಂದ ಮಾತನಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಿರುಮಾವಲವನ್, ತಾನು ಯಾವುದೇ ಮಹಿಳೆಯ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿಲ್ಲ. ಜಾತಿವಾದಿ ಕೋಮುವಾದಿ ಗುಂಪುಗಳು ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.

ನ.17ರಿಂದ ಕಾಲೇಜು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೋವಿಡ್ – 19 ಪ್ರಕರಣಗಳು ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ಕಾಲೇಜು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯೇ? ತಪ್ಪೇ? ಎಂಬ ಬಗ್ಗೆ ‘ಪ್ರಸ್ತುತ’ ಜನಾಭಿಮತ ಸಂಗ್ರಹಿಸುತ್ತಿದೆ. ಈ ಬಗ್ಗೆ ನಿಮ್ಮ ನಿಲುವನ್ನು ‘ಪ್ರಸ್ತುತ’ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಪಡಿಸಿ.

https://www.facebook.com/2171161852895947/posts/3694124020599715/

Join Whatsapp
Exit mobile version