Home ಟಾಪ್ ಸುದ್ದಿಗಳು ಡೆಲ್ಕರ್ ಸಾವು | ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ

ಡೆಲ್ಕರ್ ಸಾವು | ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ

ಹೊಸದಿಲ್ಲಿ : ಸೋಮವಾರ ಮರೈನ್ ಡ್ರೈವ್ ಹೋಟೆಲ್ ನಲ್ಲಿ ಶವವಾಗಿ ಪತ್ತೆಯಾಗಿದ್ದ ಮುಂಬೈ, ದಾದ್ರಾ ಮತ್ತು ಹವೇಲಿ ನಗರದ ಏಳು ಬಾರಿಯ  ಸಂಸದ ಮೋಹನ್ ಡೆಲ್ಕರ್ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ್ದಾರೆ.

ಆತ್ಮಹತ್ಯೆ ಪತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರಫುಲ್ ಖೋಡಾ ಪಟೇಲ್ ಮತ್ತು ಯೂನಿಯನ್ ಪ್ರದೇಶದ ಇತರ ಅಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಲೋಕಸಭಾ ಚುನಾವಣೆಯಲ್ಲಿ “ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಡೆಲ್ಕರ್ ಅವರಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಈ ಬಗ್ಗೆ ಅವರು ಪ್ರಧಾನಿ ಮತ್ತು ಗೃಹಸಚಿವರಿಗೆ ಪತ್ರವೂ ಬರೆದಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

“ಈಗ ಅಧಿಕಾರದಲ್ಲಿರುವ ಸರಕಾರ ಚುನಾವಣೆಯಲ್ಲಿ ಸೋತರೆ ಏಜೆನ್ಸಿಗಳ ಮೂಲಕ ನಿಮ್ಮೊಂದಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಒಪ್ಪದಿದ್ದರೆ ಬೆದರಿಕೆ ,ಕಿರುಕುಳ ನೀಡುತ್ತೀರಿ. ಕೊನೆಗೆ ಇಂತಹ ದುರಂತ ಫಲಿತಾಂಶಗಳು ಕಾಣಲು ಶುರುವಾಗುತ್ತದೆ “ ಎಂದು ಅವರು ಡೆಲ್ಕರ್ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

Join Whatsapp
Exit mobile version