ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶಾರ್ಜಿಲ್‌ ಇಮಾಮ್’ಗೆ ಜಾಮೀನು

Prasthutha|

ಅಲಹಾಬಾದ್ ಹೈಕೋರ್ಟ್’ನಿಂದ ಜಾಮೀನು ದೊರೆತರೂ ಬಿಡುಗಡೆ ಭಾಗ್ಯವಿಲ್ಲ!

- Advertisement -

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಾಕಾರಿ ಹಾಗೂ ದೇಶದ್ರೋಹದ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಶಾರ್ಜಿಲ್‌ ಇಮಾಮ್’ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದೆ.


ತಿಹಾರ್ ಜೈಲಿನಲ್ಲಿರುವ ಶಾರ್ಜಿಲ್‌ ಇಮಾಮ್’ಗೆ ಸದ್ಯ ಜಾಮೀನು ದೊರೆತರೂ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಉಳಿದ ಪ್ರಕರಣಗಳು ತಡೆಯಾಗಲಿವೆ. ದೆಹಲಿ ಗಲಭೆ ಪ್ರಕರಣದಲ್ಲಿ ಅವರ ಮೇಲಿನ ಕೇಸಿನ ವಿಚಾರಣೆ ನಡೆಯುತ್ತಿರುವುದರಿಂದ ಶಾರ್ಜಿಲ್‌ ಇಮಾಮ್ ಜೈಲು ವಾಸ ಮುಂದುವರಿಯಲಿದೆ.

- Advertisement -


2019ರ ಜನವರಿಯಲ್ಲಿ ಅಲೀಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಷಣದ ವೇಳೆ ಅಸ್ಸಾಂ ಅನ್ನು ಭಾರತದಿಂದ ಬೇರ್ಪಡಿಸಿ ಎಂದು ಶಾರ್ಜಿಲ್‌ ಇಮಾಮ್ ಕರೆ ಕೊಟ್ಟಿದ್ದಾಗಿ ಆರೋಪಿಸಲಾಗಿತ್ತು. ಇದರ ವಿರುದ್ಧ ಉತ್ತರ ಪ್ರದೇಶದ ಅಲಿಘರ್’ನಲ್ಲಿ ವಿವಿಧ ಸೆಕ್ಷನ್’ಗಳ ಅಡಿಯಲ್ಲಿ ದಾಖಲಾಗಿದ್ದ ದೂರಿನಲ್ಲಿ ಶನಿವಾರ ಜಾಮೀನು ದೊರೆತಿದೆ. ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಮಣಿಪುರದ ಪೊಲೀಸರು ಶಾರ್ಜಿಲ್‌ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದರು.


ಇಮಾಮ್ ಪರವಾಗಿ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ತನ್ವೀರ್ ಅಹ್ಮದ್ ಹಾಗೂ ತಾಲಿಬ್ ಮುಸ್ತಫಾ, ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಠಾಣೆಗಳಲ್ಲಿ FIR ದಾಖಲಿಸಲಾಗಿದೆ. ಆದರೆ ಶಾರ್ಜಿಲ್‌ ಇಮಾಮ್ ಭಾಷಣದಲ್ಲಿ ಗಲಭೆಗೆ ಕರೆಕೊಡುವ ಯಾವುದೇ ಅಂಶಗಳಿಲ್ಲ. ಶಾರ್ಜಿಲ್‌ ಇಮಾಮ್ ಬಂಧನವಾಗಿ ಒಂದೂವರೆ ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಸಮರ್ಪಕ ರೀತಿಯ ವಿಚಾರಣೆ ನಡೆದಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.


CAA ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿನ ಭಾಷಣದ ವಿರುದ್ಧದ ಪ್ರಕರಣದಲ್ಲಿ ಜಾಮೀನು ದೊರೆತರೂ, ದೆಹಲಿ ಗಲಭೆ ಪ್ರಕರಣ ಹಾಗೂ ಜಾಮಿಯಾ ಹಿಂಸಾತ್ಮಕ ಪ್ರತಿತಭಟನೆ ಪ್ರಕರಣದಲ್ಲಿ ಇಮಾಮ್ ಇನ್ನೂ ವಿಚಾರಣೆ ಎದುರಿಸುತ್ತಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಭುಗಿಲೆದ್ದ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದಂತೆ, ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆಯಡಿ ಶಾರ್ಜಿಲ್ ಅವರನ್ನು ಬಂಧಿಸಿದ್ದರು. ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದು, ಬಹುತೇಕರು ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Join Whatsapp