ಜಿ-20 ಶೃಂಗಸಭೆ ಹಿನ್ನೆಲೆ| ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

Prasthutha|

ಹೊಸದಿಲ್ಲಿ : 2023ರ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಆತಿಥ್ಯವನ್ನು ಭಾರತವು ವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯತಂತ್ರಗಳ ಚರ್ಚೆ ಹಾಗೂ ‍ಪೂರಕವಾಗಿ ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದೆ.

- Advertisement -

ಸರ್ವಪಕ್ಷಗಳ ಸಭೆಯು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. 40 ಪಕ್ಷಗಳ ಅಧ್ಯಕ್ಷರಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಆಹ್ವಾನ ನೀಡಿದ್ದಾರೆ.

ಜಿ20 ಶೃಂಗಸಭೆ 2023ರ ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ನಡೆಯಲಿದೆ.

- Advertisement -

ಜಿ20 ಭಾರತ ಸೇರಿ ವಿಶ್ವದ ಪ್ರಮುಖ ದೇಶಗಳು ಸದಸ್ಯರಾಗಿರುವ ಅಂತರರಾಷ್ಟ್ರೀಯ ವೇದಿಕೆಯಾಗಿದೆ.

Join Whatsapp