Home ಟಾಪ್ ಸುದ್ದಿಗಳು ಜಾರಿ ನಿರ್ದೇಶನಾಲಯದ ಅನ್ಯಾಯದ ಶೋಧನೆ ಖಂಡಿಸಿ ಪಾಪ್ಯುಲರ್ ಫ್ರಂಟ್ ಪತ್ರಿಕಾಗೋಷ್ಠಿ

ಜಾರಿ ನಿರ್ದೇಶನಾಲಯದ ಅನ್ಯಾಯದ ಶೋಧನೆ ಖಂಡಿಸಿ ಪಾಪ್ಯುಲರ್ ಫ್ರಂಟ್ ಪತ್ರಿಕಾಗೋಷ್ಠಿ

ದೇಶದ ವಿವಿಧ ಕಡೆಗಳಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರ ಮನೆಯಲ್ಲಿ ಜಾರಿ ನಿರ್ದೇಶನಾಲಯ ತಂಡವು ನಡೆಸಿದ ಅನ್ಯಾಯದ ಶೋಧನೆಯನ್ನು ಖಂಡಿಸಿ ಪಾಪ್ಯಲರ್ ಫ್ರಂಟ್ ಇಂದು ಬೆಂಗಳೂರಿನ ಇಂಡಿಯನ್ ಸೋಷಿಯಲ್ ಇನ್ಸ್ ಟಿಟ್ಯೂಟ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು.

ಈ ವೇಳೆ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್, ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ ತಂತ್ರ ನಡೆಸಲಾಗಿದೆ. ವಿಶೇಷವಾಗಿ ನಮ್ಮ ಮೇಲೆ ಕಾರ್ಯಾಚರಣೆ ನಡೆದಾಗ ಅಧಿಕಾರಿಗಳಿಗೆ ಕಾನೂನುಬದ್ಧ ದಾಖಲೆಗಳ ಹೊರತಾಗಿ ಬೇರೇನೂ ದೊರಕಿಲ್ಲ. ಮಾರ್ಚ್ ತಿಂಗಳಲ್ಲಿ ಯಾವ ರೀತಿಯ ವಿಚಾರಣೆ ನಡೆದಿತ್ತೋ, ಅದೇ ಈಗ ಪುನರಾವರ್ತನೆಯಾಗಿದೆಯಷ್ಟೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಅಫ್ಸರ್ ಪಾಷ ಉಪಸ್ಥಿತರಿದ್ದರು.

Join Whatsapp
Exit mobile version