ಚುನಾವಣೆ ಎಫೆಕ್ಟ್ | ಬಂಗಾಳದಲ್ಲಿ ವೇತನ ಹೆಚ್ಚಳ, ತಮಿಳುನಾಡಿನಲ್ಲಿ ಸಾಲ ಮನ್ನಾ

Prasthutha|

- Advertisement -

ಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಬಂಗಾಳ ಮತ್ತು ತಮಿಳುನಾಡು ರಾಜ್ಯದ ಮುಖ್ಯಮಂತ್ರಿಗಳು ಸರ್ಕಾರದ ನೂತನ ಕಲ್ಯಾಣ ಯೋಜನೆಯನ್ನು ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೌಶಲ್ಯರಹಿತ ಕಾರ್ಮಿಕರಿಗೆ ಹಿಂದಿನ 144ರೂ ರಿಂದ ದಿನಕ್ಕೆ 202ರೂ ಹೆಚ್ಚಳ, ಅರೆ-ನುರಿತರಿಗೆ 172 ರಿಂದ 303 ರೂ ಗೆ ಹೆಚ್ಚಳ ಮತ್ತು  ನುರಿತ ಕಾರ್ಮಿಕರಿಗೆ 404ರೂ ಹೆಚ್ಚಳ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ಉದ್ಯೋಗ ಯೋಜನೆಯಡಿ 56,500 ಕಾರ್ಮಿಕರು – 40,500 ಕೌಶಲ್ಯರಹಿತರು, 8,000 ಅರೆ-ನುರಿತರು ಮತ್ತು 8,000 ನುರಿತರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಘೋಷಿಸಿದ್ದಾರೆ.

- Advertisement -

ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸಾಮಿ ಸರ್ಕಾರವು ಮತದಾನದ ಘೋಷಣೆಗೆ ಕೆಲವೇ ನಿಮಿಷಗಳ ಮೊದಲು ವನ್ನಿಯಾರ್ ಸಮುದಾಯಕ್ಕೆ 10.5% ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿದೆ. ಸಹಕಾರಿ ಬ್ಯಾಂಕುಗಳು ರೈತರಿಗೆ ಮತ್ತು ಬಡವರಿಗೆ ನೀಡಿದ ಚಿನ್ನದ ಸಾಲವನ್ನು ಮನ್ನಾ ಮಾಡಲಾಗುವುದು ಎಂಬ ಘೋಷಣೆಯನ್ನು ಮಾಡಿದ್ದಾರೆ.

Join Whatsapp