ಬೆಂಗಳೂರು: ಸಾವರ್ಕರ್ ಚಿತ್ರ ತೆರವುಗೊಳಿಸಿದ್ದನ್ನು ಖಂಡಿಸದೆ, ಗೂಂಡಾ ಸಂಸ್ಕೃತಿ ಬೆಂಬಲಿಸುವ ಸಿದ್ದರಾಮಯ್ಯ ದೇಶದ್ರೋಹಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಾಲಗೆ ಹರಿಯಬಿಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗಲಭೆಕೋರರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರ ಕಿತ್ತೆಸೆದು ಪ್ರೇಮ್ ಸಿಂಗ್ ಮೇಲೆ ನಡೆಸಿರುವ ಘಟನೆಯನ್ನು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಖಂಡಿಸದೆ ಗೂಂಡಾ ಸಂಸ್ಕೃತಿಯವರನ್ನು ಬೆಂಬಲಿಸುವ ರೀತಿ ಹೇಳಿಕೆ ನೀಡಿದ್ದಾರೆ. ಇದರಿಂದ ಸಿದ್ದರಾಮಯ್ಯ ದೇಶದ್ರೋಹಿ ಎನ್ನುವುದು ಸಾಬೀತಾಗಿದೆ ಎಂದು. ಈಶ್ವರಪ್ಪ ಹೇಳಿದರು.
ಮಂಗಳವಾರ ನಗರದ ನೆಹರೂ ನಗರ ಬಡಾವಣೆಯಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗ ದಳ ಕಾರ್ಯಕರ್ತ ಸುನೀಲ್ ನನ್ನು ಭೇಟಿ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಭಾವಚಿತ್ರವನ್ನು ಸರ್ಕಲ್ನಲ್ಲಿ ಹಾಕಿದ ಕಾರಣಕ್ಕೆ ಅದನ್ನು ಕಿತ್ತಸೆದಿರುವ ಹಾಗೂ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಗಲಭೆಕೋರರನ್ನು ನಮ್ಮ ಸರಕಾರ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಾಲಗೆ ಹರಿಯಬಿಟ್ಟ ಈಶ್ವರಪ್ಪ ಹೇಳಿಕೆಯನ್ನು ವ್ಯಂಗ್ಯ ಮಾಡಿದ ಸಿದ್ದು ಬೆಂಬಲಿಗರು, ಪ್ರವೀಣ್ ಭೇಟಿ ಮಾಡಿದ ಈಶ್ವರಪ್ಪ ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಯವರನ್ನೂ ಭೇಟಿ ಮಾಡಲಿ. ಇನ್ನೊಬ್ಬರಿಗೆ ದೇಶದ್ರೋಹದ ಪಟ್ಟ ಕಟ್ಟುವುದು ಈಶ್ವರಪ್ಪಗೆ ಚಾಳಿಯಾಗಿದೆ ಎಂದು ಆಕ್ಷೇಪ ಮಾಡಿದ್ದಾರೆ.