Home ಗಲ್ಫ್ ಗಾಂಧಿ ವಿಚಾರಧಾರೆ ಪ್ರಚುರಪಡಿಸುವುದು ಕಾಲದ ಅಗತ್ಯ: ಇಂಡಿಯನ್ ಸೋಶಿಯಲ್ ಫ಼ೋರಂ

ಗಾಂಧಿ ವಿಚಾರಧಾರೆ ಪ್ರಚುರಪಡಿಸುವುದು ಕಾಲದ ಅಗತ್ಯ: ಇಂಡಿಯನ್ ಸೋಶಿಯಲ್ ಫ಼ೋರಂ

ರಿಯಾದ್: ಭಾರತವನ್ನು ಬಹುತ್ವದ ಜಾತ್ಯತೀತ ಸಹಬಾಳ್ವೆಯ ರಾಷ್ಟ್ರವನ್ನಾಗಿ ನಿರ್ಮಿಸಬೇಕೆಂದು ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ವಿಚಾರಗಳನ್ನು ಪ್ರಚುರಪಡಿಸುವುದು ಪ್ರಸಕ್ತ ಭಾರತದಲ್ಲಿ ಅತ್ಯಂತ ಅಗತ್ಯವಾಗಿದ್ದು, ಗಾಂಧೀಜಿಯವರನ್ನು ಮತ್ತೆ ಮತ್ತೆ ನೆನಪಿಸುವ ಕಾರ್ಯವಾಗಬೇಕು ಎಂದು ಇಂಡಿಯನ್ ಸೋಶಿಯಲ್ ಫ಼ೋರಂನ ಸೌದಿ ಅರೇಬಿಯಾದ ಅಧ್ಯಕ್ಷ ಮುಹಮ್ಮದ್ ಶರೀಫ಼್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗಾಂಧೀ ಜಯಂತಿಯ ಪ್ರಯುಕ್ತ ಎಲ್ಲಾ ಭಾರತೀಯ ನಾಗರಿಕರಿಗೆ ಇಂಡಿಯನ್ ಸೋಶಿಯಲ್ ಫೋರಂ ಪರವಾಗಿ ಶುಭಹಾರೈಕೆಯನ್ನು ಮಾಡಿದ್ದಾರೆ.

ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಸಿದ್ಧಾಂತವನ್ನು ಜಗತ್ತು ಗುರುತಿಸಿದೆ. ಆದರೆ ದುರದೃಷ್ಟವೆಂದರೆ ಇಂದು ಗಾಂಧೀಜಿಯವರನ್ನು ಹತ್ಯೆ ಮಾಡಿದ ಫ್ಯಾಶಿಸ್ಟ್ ಸಿದ್ಧಾಂತವು ಭಾರತವನ್ನು ಆಳುತ್ತಿದೆ. ಶಾಸಕಾಂಗ, ಕಾರ್ಯಾಂಗ ಮಾತ್ರವಲ್ಲದೆ ನ್ಯಾಯಾಂಗದಂತಹ ಸ್ವತಂತ್ರ ಸಂಸ್ಥೆಗಳ ಮೇಲೂ ನಿಯಂತ್ರಣವನ್ನು ಸಾಧಿಸಿದ್ದು ಪ್ರಜಾಪ್ರಭುತ್ವ ಅಪಾಯದ ಸನ್ನಿವೇಶದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಜಾತ್ಯತೀತ ತತ್ವದ ಮೇಲೆ ದೇಶವು ಮುಂದುವರಿಯ ಬಯಸುವವರಿಗೆ ಗಾಂಧೀಜಿ ನೆನಪು ಮತ್ತೆ ಮತ್ತೆ ಕಾಡುತ್ತಿದೆ. ಗಾಂಧೀಜಿಯ ಸತ್ಯ, ಅಹಿಂಸೆಯ ವಿಚಾರಧಾರೆಗಳನ್ನು ದೇಶದ ಜನರಲ್ಲಿ ಹೆಚ್ಚು ಹೆಚ್ಚು ಪ್ರಚುರಪಡಿಸುವ ಮೂಲಕ ನಾವು ಪ್ರೀತಿ ಮತ್ತು ಸೌಹಾರ್ದದ ರಾಷ್ಟ್ರವನ್ನು ಕಟ್ಟಬೇಕಾಗಿದೆ ಎಂದು ಶರೀಫ಼್ ಹೇಳಿದ್ದಾರೆ.

Join Whatsapp
Exit mobile version