Home ಕರಾವಳಿ ಖಾಸಗಿ ಬಸ್ಸು ಉದ್ಯಮದ ಮೇಲೆ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸಿದೆ : ದ.ಕ ಜಿಲ್ಲಾ...

ಖಾಸಗಿ ಬಸ್ಸು ಉದ್ಯಮದ ಮೇಲೆ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸಿದೆ : ದ.ಕ ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಆಕ್ರೋಶ

ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾಡಿರುವ ವಿಶೇಷ ಪ್ಯಾಕೇಜ್ ಘೋಷಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾದ ದಿಲ್‌ರಾಜ್ ಆಳ್ವ ಟೀಕಿಸಿದ್ದು, ಖಾಸಗಿ ಬಸ್ಸು ಉದ್ಯಮದ ಮೇಲೆ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ವಿಶೇಷ ಅರ್ಥಿಕ ಪ್ಯಾಕ್ ಘೋಷಿಸಿರುವುದು ಸಂತೋಷದ ವಿಚಾರ ಆದರೆ ನಮ್ಮ ಸ್ಟೇಜ್ ಕ್ಯಾರೇಜ್ ಪರವಾನಿಗೆಯ ಖಾಸಗಿ ಬಸ್ಸು ಉದ್ಯಮದ ಮೇಲೆ ಮತ್ತೊಮ್ಮೆ ಮಲತಾಯಿ ಧೋರಣೆ ಅನುಸರಿಸಿದೆ ರಾಜ್ಯಾದಂತ 9000 ಬಸ್ಸುಗಳು ಕಾರ್ಯ ನಿರ್ವಹಿಸುತ್ತಿದ್ದು ನಾವು ಡಿಸೇಲ್ ಮೂಲಕ 115ಕೋ ಮತ್ತು ರಸ್ತೆ ತೆರಿಗೆ ಮೂಲಕ 15ಕೋ ತೆರಿಗೆಯನ್ನು  ತಿಂಗಳಿಗೆ ಪಾವತಿಸುತ್ತೇವೆ ಎಂದು ಕಿಡಿಕಾರಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ನಮ್ಮ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ, ಆದರೆ ಪ್ಯಾಕೇಜ್ ಘೋಷಣೆಯ ಸಂದರ್ಭದಲ್ಲಿ ನಮ್ಮ ಖಾಸಗಿ ಬಸ್ಸ್ ನೌಕರರಿಗೆ ಯಾವುದೇ ಸೌಲಭ್ಯಗಳನ್ನು ಘೋಷಿಸಿಲ್ಲ ಮತ್ತು ನಮಗೆ ಯಾವುದೇ ತೆರಿಗೆ ವಿನಾಯಿತಿ ನೀಡಲಿಲ್ಲ. KSRTC ನೌಕರರ ಮುಷ್ಕರದ ಸಂದರ್ಭದಲ್ಲಿ ನಮ್ಮನ್ನು ಉಪಯೋಗಿಸಿಕೊಂಡ ಸರ್ಕಾರಕ್ಕೆ ಇಂದು ಪ್ಯಾಕೇಜ್ ಘೋಷಣೆಯ ಸಮಯದಲ್ಲಿ ನಮ್ಮನ್ನು ನಿರ್ಲಕ್ಷಿಸಿದ್ದು ಬೇಸರದ ವಿಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version