ಕೋಝಿಕ್ಕೋಡ್‌ ಗೆ ಹೊರಟ ವಿಮಾನದಲ್ಲಿ ಬೆಂಕಿ; ಅಬುಧಾಬಿಯಲ್ಲೇ ಮತ್ತೆ ಲ್ಯಾಂಡ್

Prasthutha|

ಕ್ಯಾಲಿಕಟ್: ಅಬುಧಾಬಿಯಿಂದ ಕೋಝಿಕ್ಕೋಡ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಟೇಕ್ ಆಫ್ ಆದ ಕೂಡಲೇ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

- Advertisement -


ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ವಿಮಾನವು ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ್ದು, ಯಾವುದೇ ರೀತಿಯ ಅಪಾಯ ಉಂಟಾಗಿಲ್ಲ. ಸಮುದ್ರ ಮಟ್ಟದಿಂದ ಸುಮಾರು 1 ಸಾವಿರ ಅಡಿ ಎತ್ತರದಲ್ಲಿ ಜ್ವಾಲೆ ಪತ್ತೆಯಾಗಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.ಆದರೆ ಒಂದು ಕ್ಷಣಕ್ಕೆ ಜನ ಭಯಭೀತ ಗೊಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತಿಳಿಸಿದೆ.


ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಅಧಿಕಾರಿಗಳು ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬಿ737-800 ವಿಮಾನ ವಿಟಿ-ಎವೈಸಿ ಆಪರೇಟಿಂಗ್ ಫ್ಲೈಟ್ ಐಎಕ್ಸ್ 348 (ಅಬುಧಾಬಿ-ಕ್ಯಾಲಿಕಟ್ ) ನಂ.1 ಇಂಜಿನ್ ಫ್ಲ್ಯಾಮ್‌ಔಟ್‌ನಿಂದ ಏರ್‌ಟರ್ನ್‌ಬ್ಯಾಕ್‌ನಲ್ಲಿ 1000 ಅಡಿಗಳಲ್ಲಿ ಎತ್ತರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

- Advertisement -


ಅಬುಧಾಬಿಯಿಂದ ಕ್ಯಾಲಿಕಟ್‌ಗೆ ಹೊರಟಿದ್ದ ವಿಮಾನವು ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಹಿಂತಿರುಗಿತು. ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ. ಒಂದು ವಾರದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಎರಡನೇ ಘಟನೆ ಇದಾಗಿದೆ.


ಕಳೆದ ಜ. 29 ರಂದು, ಶಂಕಿತ ಹೈಡ್ರಾಲಿಕ್ ವೈಫಲ್ಯದ ನಂತರ ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ರಾತ್ರಿ 8.04ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗುವುದು ಘೋಷಣೆ ಮಾಡಲಾಯಿತು. ರಾತ್ರಿ 8.36ಕ್ಕೆ ಮತ್ತೆ ತನ್ನ ಕಾರ್ಯಚರಣೆಯನ್ನು ಪ್ರಾರಂಭಿಸಿದ. ಶಾರ್ಜಾದಿಂದ ಐ ಎಕ್ಸ್ 412 ವಿಮಾನದಲ್ಲಿದ್ದ ಎಲ್ಲಾ 193 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕೊಚ್ಚಿನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಸಿಐಎಎಲ್) ತಿಳಿಸಿದೆ.


ಜನವರಿ 23 ರಂದು, ತಿರುವನಂತಪುರದಿಂದ ಮಸ್ಕತ್, ಓಮನ್‌ಗೆ ಮತ್ತೊಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಅದರ ಆನ್‌ಬೋರ್ಡ್ ಕಂಪ್ಯೂಟರ್ ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಟೇಕ್-ಆಫ್ ಆಗಿರುವ ಘಟನೆಯು ಕೂಡ ನಡೆದಿದೆ. ಆರಂಭಿಕ ವಿಮಾನ, ಐಎಕ್ಸ್ 549, ಕೇರಳದ ರಾಜ್ಯ ರಾಜಧಾನಿಯಿಂದ 8.30 ಕ್ಕೆ ಟೇಕ್ ಆಫ್ ಆಗಿದ್ದು, ಪೈಲಟ್‌ಗಳಲ್ಲಿ ಒಬ್ಬರು ತಾಂತ್ರಿಕ ದೋಷವನ್ನು ಗಮನಿಸಿದ ನಂತರ ಬೆಳಿಗ್ಗೆ 9.17 ಕ್ಕೆ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದರು.

Join Whatsapp