ಮಡಿಕೇರಿ: ರೈಲ್ವೇ ಬ್ಯಾರಿಕೇಡ್ ನಲ್ಲಿ ಕಾಡಾನೆಯೊಂದು ಸಿಲುಕಿದ ಘಟನೆ ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಬಳಿ ನಡೆದಿದೆ.
ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ದಡದಲ್ಲಿ ಕಾಡಾನೆ ತಡೆಗೆ ಅರಣ್ಯ ಇಲಾಖೆ ರೈಲ್ವೇ ಬ್ಯಾರಿಕೇಡ್ ಅಳವಡಿಸಿತ್ತು. ಗ್ರಾಮದ ಸುರೇಶ್ ಎಂಬವರ ಕಾಫಿತೋಟದಲ್ಲಿದ್ದ ಅಂದಾಜು 25 ವರ್ಷ ಪ್ರಾಯದ ಸಲಗವೊಂದು ತೋಟದಿಂದ ಅರಣ್ಯಕ್ಕೆ ಬ್ಯಾರಿಕೇಡ್ ದಾಟಲು ಮುಂದಾಗಿದ್ದು, ಬ್ಯಾರಿಕೇಡ್ ಮುರಿಯಲು ಯತ್ನಿಸಿದೆ. ಬಳಿಕ ಬ್ಯಾರಿಕೇಡ್ ಕೆಳಭಾಗದಿಂದ ದಾಟಲು ಯತ್ನಿಸುವ ಸಂದರ್ಭ ಸುಲುಕಿಕೊಂಡಿದ್ದು, ಬ್ಯಾರಿಕೇಡ್ ನಿಂದ ಹೊರಬರಲು ಪ್ರಯತ್ನಿಸಿದೆ. ಬಳಿಕ ಕೆಲವು ಗಂಟೆಗಳ ಪ್ರಯತ್ನದ ಬಳಿಕ ಕಾಡಾನೆಯು ಸುರಕ್ಷಿತವಾಗಿ ಬ್ಯಾರಿಕೇಡ್ ನಿಂದ ಹೊರಬಂದು ದುಬಾರೆ ಮೀಸಲು ಅರಣ್ಯಕ್ಕೆ ತೆರಳಿದೆ.