ಕೇಸರಿ ವಸ್ತ್ರಧಾರಿ ತಿರುವಳ್ಳುವರ್ ಭಾವಚಿತ್ರಕ್ಕೆ ಕೊಕ್ !

Prasthutha|

ತಮಿಳಿನ ಖ್ಯಾತ ಕವಿ ತಿರುವಳ್ಳುವರ್ ಅವರಿಗೆ ಕೇಸರಿ ಬಣ್ಣದ ವಸ್ತ್ರ ಧರಿಸಿದ ಭಾವಚಿತ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಆ ಭಾವಚಿತ್ರವನ್ನು ತೆರವುಗೊಳಿಸಿ ಬಳಿ ವಸ್ತ್ರಧಾರಣೆಯ ಚಿತ್ರವನ್ನು ಅಳಡಿಸಿ ವಿವಾದಕ್ಕೆ ತೆರೆ ಎಳೆದಿದೆ.
ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯ (ಟಿಎನ್‌ಎಯು)ದಲ್ಲಿದ್ದ ಭಾವಚಿತ್ರವನ್ನು ತೆಗೆದುಹಾಕಲಾಗಿದೆ.

- Advertisement -


ಅಧಿಕಾರಿಗಳು ಗುರುವಾರ ಬೆಳಿಗ್ಗೆ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿದ್ದ ಕೇಸರಿ ವಸ್ತ್ರ ಧರಿಸಲ್ಪಟ್ಟ ತಿರುವಳ್ಳುವರ್ ಭಾವಚಿತ್ರವನ್ನು ತೆಗೆದುಹಾಕಿ, ಅಲ್ಲಿಗೆ ಬಿಳಿ ಉಡುಪಿನಲ್ಲಿರುವ ಪ್ರಾಚೀನ ಕವಿಯ ಭಾವಚಿತ್ರವನ್ನು ಅಳವಡಿಸಿದ್ದಾರೆ. ತಿರುವಳ್ಳುವರ್ ಚಿತ್ರಕ್ಕೆ ಬಿಳಿ ವಸ್ತ್ರಧಾರಣೆಯನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ಅನುಮೋದಿಸಿತ್ತು


ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಎಂ.ಆರ್.ಕೆ. ಪನ್ನೀರ್ ಸೆಲ್ವಂ ಗುರುವಾರ ಟ್ವೀಟ್ ಮಾಡಿ, “ಪ್ರಾಥಮಿಕ ತನಿಖೆಯ ಪ್ರಕಾರ” ಕೇಸರಿ-ಹೊದಿಕೆಯ ಭಾವಚಿತ್ರವನ್ನು 2017-18ರಲ್ಲಿ ಸ್ಥಾಪಿಸಲಾಗಿದೆ. ಟಿಎನ್‌ಎಯು ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ, ತಿರುವಳ್ಳುವರ್ ಅವರ ಅಧಿಕೃತ ಭಾವಚಿತ್ರವನ್ನು “ಅದೇ ಸ್ಥಳದಲ್ಲಿ” ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಟಿಎನ್‌ಎಯುನಲ್ಲಿ ತಿರುವಳ್ಳುವರ್ ಅವರ ಅನುಮೋದಿತ ಭಾವಚಿತ್ರವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದ ತಂತೈ ಪೆರಿಯಾರ್ ದ್ರಾವಿಡರ್ ಕಝಗಂನ ಪ್ರಧಾನ ಕಾರ್ಯದರ್ಶಿ ಕೆ.ರಾಮಕೃಷ್ಣನ್, ಕೇಸರಿ-ಹೊದಿಕೆಯ ಚಿತ್ರವು “ತಿರುವಳ್ಳುವರ್ ಅನ್ನು ಒಂದು ಧರ್ಮದೊಂದಿಗೆ ಗುರುತಿಸುವ ಕೋಮು ಶಕ್ತಿಗಳ ಪ್ರಯತ್ನ ಎಂದು ಆರೋಪಿಸಿದ್ದಾರೆ.

- Advertisement -


ನಾಲ್ಕು ವರ್ಷಗಳ ಹಿಂದೆ ಗ್ರಂಥಾಲಯದ ನವೀಕರಣ ಕಾರ್ಯದ ಸಮಯದಲ್ಲಿ ಕೇಸರಿ-ಹೊದಿಕೆಯ ತಿರುವಳ್ಳುವರ್ ಭಾವಚಿತ್ರವನ್ನು ಸ್ಥಾಪಿಸಲಾಗಿತ್ತು ಎಂದು ಟಿಎನ್‌ಎಯು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದರು. ಇದು ಯಾವುದೇ ರೀತಿಯಲ್ಲಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ವಿವಾದ ಉಂಟಾಗಿತ್ತು.

Join Whatsapp