ಕೊಲ್ಕತ್ತಾ: ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ, ಪ್ರವಾದಿ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಪೊಲೀಸ್ ಠಾಣೆ ನೀಡಿದ ಸಮನ್ಸ್ ಕರೆಯನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಲ್ಕತ್ತಾದ ಅಮ್ಹೆರ್ಸ್ಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಸಮನ್ಸ್ ಪ್ರಕಾರ, ಶರ್ಮಾ ಅವರು ಶನಿವಾರದಂದು ಠಾಣೆಯಲ್ಲಿ ಹಾಜರಾಗಬೇಕಿತ್ತು. ಆದರೆ ಶರ್ಮಾ ಅವರು ಭದ್ರತೆಯ ನೆಪದಲ್ಲಿ ಆ ಕರೆಯನ್ನು ನಿರಾಕರಿಸಿದ್ದು, ಗೈರು ಹಾಜರಾಗಿದ್ದಾರೆ.
ಶರ್ಮಾ ಅವರು ,ಕೊಲ್ಕತ್ತಾ ಪೊಲೀಸರಿಂದ ಸಮನ್ಸನ್ನು ನಿರ್ಲಕ್ಷಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಆಕೆಗೆ ಕೊಲ್ಕತ್ತಾದ ಪೂರ್ವ ಉಪನಗರ ವಿಭಾಗದ ನರ್ಕೆಲ್‌ದಂಗ ಪೊಲೀಸ್ ಠಾಣೆಯಿಂದ ನೋಟಿಸ್ ಕಳುಹಿಸಲಾಗಿತ್ತು. ಅದಕ್ಕೂ ಅವರು ಗೈರು ಹಾಜರಾಗಿದ್ದರು.