Home ಗಲ್ಫ್ ಕತಾರ್; ವಿಶ್ವ ಚಾಂಪಿಯನ್ ಓಟಗಾರ ಅಬ್ದುಲ್ಲಾಹಿ ಹಾರೂನ್ ಕಾರು ಅಪಘಾತದಲ್ಲಿ ಮೃತ್ಯು

ಕತಾರ್; ವಿಶ್ವ ಚಾಂಪಿಯನ್ ಓಟಗಾರ ಅಬ್ದುಲ್ಲಾಹಿ ಹಾರೂನ್ ಕಾರು ಅಪಘಾತದಲ್ಲಿ ಮೃತ್ಯು

ವಿಶ್ವ ಚಾಂಪಿಯನ್‌ ಶಿಪ್‌ನ 400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದ ಕತಾರ್ ನ ಅದ್ಭುತ ಓಟಗಾರ ಅಬ್ದುಲ್ಲಾಹಿ ಹಾರೂನ್ ಶನಿವಾರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಅಥ್ಲೆಟಿಕ್ಸ್‌ನ ಜಾಗತಿಕ ಆಡಳಿತ ಮಂಡಳಿ ತಿಳಿಸಿದೆ.


ಅವರಿಗೆ 24 ವರ್ಷ ವಯಸ್ಸಾಗಿತ್ತು. ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಹಾರೂನ್ ಅವರು ಗಾಯದ ಹಿನ್ನೆಲೆಯಲ್ಲಿ ವಿಶ್ರಾಂತಿಗೆ ಒಳಗಾಗಿದ್ದರೂ ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಆಶಯ ಹೊಂದಿದ್ದರು.
ಕತಾರ್ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಶೇಖ್ ಜೋವಾನ್ ಬಿನ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರು ಟ್ವೀಟ್ ನಲ್ಲಿ ಈ ವಿಷಯ ತಿಳಿಸಿದ್ದು, ಅಪಘಾತದಲ್ಲಿ “ವೀರ ಓಟಗಾರನನ್ನು ಕತಾರ್ ಕಳೆದುಕೊಂಡಿದೆ’ ಎಂದು ಹೇಳಿದ್ದಾರೆ.


ಹಾರೂನ್ ಅವರು ಸುಡಾನ್‌ನಲ್ಲಿ ಜನಿಸಿದ್ದರೂ 2015 ರಲ್ಲಿ ಕತಾರ್ ಅನ್ನು ಪ್ರತಿನಿಧಿಸುವ ಹಕ್ಕನ್ನು ಪಡೆದರು, ಅದೇ ವರ್ಷ ಅವರು ತನ್ನ 18 ನೇ ವಯಸ್ಸಿನಲ್ಲಿ ಏಷ್ಯನ್ 400 ಮೀಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು ಮತ್ತು 44.27 ರ ಏಷ್ಯನ್ ಅಂಡರ್ -20 ಯಲ್ಲಿ ದಾಖಲೆಯನ್ನು ನಿರ್ಮಿಸಿದ್ದರು.
ಬಳಿಕದ ವರ್ಷ ಅವರು ಏಷ್ಯನ್ ಇಂಡೋರ್ ಪ್ರಶಸ್ತಿಯನ್ನು ಗೆದ್ದಿದ್ದರು. ರಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಮೊದಲು ಪೋರ್ಟ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.

Join Whatsapp
Exit mobile version