ಮುಂಬೈ : ತಮ್ಮ ಟ್ವೀಟ್ ಮತ್ತು ಸಂದರ್ಶನಗಳ ಮೂಲಕ ಕೋಮು ಉದ್ವಿಗ್ನತೆ ಸೃಷ್ಟಿಗೆ ಕಾರಣರಾದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂಡೆಲ್ ಗೆ ಮುಂಬೈ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. ಅ.26 ಮತ್ತು 27ರಂದು ವಿಚಾರಣೆಗೆ ಹಾಜರಾಗುವಂತೆ ಸಹೋದರಿಯರಿಗೆ ಸಮನ್ಸ್ ನಲ್ಲಿ ಸೂಚಿಸಲಾಗಿದೆ.
ಕೋಮು ಉದ್ವಿಗ್ನತೆಗೆ ಕಾರಣರಾದ ಆರೋಪಕ್ಕೆ ಸಂಬಂಧಿಸಿ ಸಹೋದರಿಯರ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮುಂಬೈ ಪೊಲೀಸರಿಗೆ ಅ.17ರಂದು ನ್ಯಾಯಾಲಯವೊಂದು ಆದೇಶಿಸಿತ್ತು. ಮುಂಬೈಯ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಕಲಂ 153ಎ, 295ಎ ಮತ್ತು 124ಎ ಆಧಾರದಲ್ಲಿ ಸಹೋದರಿಯರ ವಿರುದ್ಧ ದೂರು ದಾಖಲಾಗಿತ್ತು. ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ರಣಾವತ್ ಹೇಳಿದ್ದ ಕುರಿತಂತೆ ಮುನಾವರಾಲಿ ಸಯ್ಯದ್ ಎಂಬವರು ದೂರು ದಾಖಲಿಸಿದ್ದರು.