Home ಗಲ್ಫ್ ಒಮಾನ್ : ಸೋಶಿಯಲ್ ಫೋರಮ್ ನಿಂದ ರಕ್ತದಾನ ಶಿಬಿರ

ಒಮಾನ್ : ಸೋಶಿಯಲ್ ಫೋರಮ್ ನಿಂದ ರಕ್ತದಾನ ಶಿಬಿರ

ಮಸ್ಕತ್: ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ತೀವ್ರ ರಕ್ತದ ಆವಶ್ಯಕತೆ ಇರುವುದನ್ನು ಮನಗಂಡು ಸೋಶಿಯಲ್ ಫೋರಮ್ ಒಮಾನ್ ಮತ್ತು ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ಸಹಭಾಗಿತ್ವದಲ್ಲಿ ಆಗಸ್ಟ್ 21ರಂದು ಸೊಹಾರ್ ನಗರದ ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು. ಸುಮಾರು 100ರಷ್ಟು ಅನಿವಾಸಿ ಭಾರತೀಯರು ರಕ್ತದಾನದಲ್ಲಿ ಪಾಲ್ಗೊಂಡರು.

ಸೊಹಾರ್ ನ ದಾರ್ ಅಲ್ ಮಜ್ದ್ ಮೆಡಿಕಲ್ ಸೆಂಟರ್ ನಲ್ಲಿ ಸಂಸ್ಥೆಯ ಸ್ಥಾಪಕ ಸಮೀವುನ್ ಬಶೀರ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೊಹಾರ್ ಹಾಸ್ಪಿಟಲ್ ಬ್ಲಡ್ ಬ್ಯಾಂಕಿನ ಉಸ್ತುವಾರಿ ಫಾತಿಮ್ ಅಲ್ ಖಾಸಿಮಿ,  ಸೋಶಿಯಲ್ ಫೋರಮ್ ನ ಮುಹಿಯುದ್ದೀನ್, ಒಮಾನ್ ಪ್ರಾಥಮಿಕ ನ್ಯಾಯಾಲಯದ ನ್ಯಾಯಾಧೀಶ ಅಲಿ ಅಹ್ಮದ್ ಅಲಿ ಅಲ್ ಮಾಯಿನಿ,  ಮಿಸ್ಕೋ ಕಂಪೆನಿಯ ಮಧುಸೂದನ್ ಟಾಟಾ ಮುಂತಾದವರು ಉಪಸ್ಥಿತರಿದ್ದರು.

ಆಸ್ಪತ್ರೆಯ ಫೈನಾನ್ಸ್ ಮೆನೇಜರ್ ಇರ್ಶಾದ್  ಸ್ವಾಗತಿಸಿದರು. ದಂತ ವೈದ್ಯ ಡಾ. ಶರೀಫ್ ದರ್ವೀಶ್ ಧನ್ಯವಾದ ಸಲ್ಲಿಸಿದರು. ಸಂಸ್ಥೆಯ ಪಿಆರ್ ಒ ನಯೀಮ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ನಸೀಮಾ ರಹ್ಮಾನ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ರೋಗಿಗಳ ಅನುಕೂಲಕ್ಕಾಗಿ ಹೆಲ್ತ್ ಕಾರ್ಡ್ ಯೋಜನೆಯನ್ನು ಬಿಡುಗಡೆಗೊಳಿಸಲಾಯಿತು. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೋಶಿಯಲ್ ಫೋರಮ್ ವತಿಯಿಂದ ಆಯೋಜಿಸಲಾಗಿದ್ದ ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸೊಹಾರ್ ಸ್ಕೂಲ್ ವಿದ್ಯಾರ್ಥಿನಿ ಮುಝಫ್ಫರಿಗೆ ಡಾ.ಅಬ್ದುಲ್ ವಾಸೀ ನಗದು ಬಹುಮಾನ ವಿತರಿಸಿದರು.

Join Whatsapp
Exit mobile version