Home ಕರಾವಳಿ ಎಚ್.ಐ.ಎಫ್. ಇಂಡಿಯಾ ‘ಪ್ರಾಜೆಕ್ಟ್ ಬೂಂದ್’ ಯೋಜನೆಯಡಿ ಕುಡಿಯುವ ನೀರಿನ ಘಟಕ ಸ್ಥಾಪನೆ

ಎಚ್.ಐ.ಎಫ್. ಇಂಡಿಯಾ ‘ಪ್ರಾಜೆಕ್ಟ್ ಬೂಂದ್’ ಯೋಜನೆಯಡಿ ಕುಡಿಯುವ ನೀರಿನ ಘಟಕ ಸ್ಥಾಪನೆ

ಮಂಗಳೂರು: ಎಚ್.ಐ.ಎಫ್ ಇಂಡಿಯಾದ ‘ಪ್ರಾಜೆಕ್ಟ್ ಭೂಂದ್’ ಯೋಜನೆಯಡಿಯಲ್ಲಿ ನಗರದ ಮೀನು ವ್ಯಾಪಾರ ಸ್ಥಳವಾದ ದಕ್ಕೆಯಲ್ಲಿ ಸಾರ್ವಜನಿಕರಿಗೆ ಕುಡಿಯಲು ಶುದ್ಧ ಬಿಸಿ ಮತ್ತು ತಂಪು ನೀರು ಹೊಂದಿರುವಂತಹ ವಾಟರ್ ಡಿಸ್ಪೆನ್ಸರನ್ನು ದಕ್ಕೆ ಮೀನು ಮಾರಾಟ ಒಕ್ಕೂಟದ ಸಹಕಾರದಿಂದ ಅಳವಡಿಸಲಾಯಿತು.
ಎಹ್ಸಾನ್ ಮಸೀದಿಯ ಇಮಾಮ್ ಮೌಲಾನ ಅಲ್ತಾಫ್ ಅವರು ದುಆ ನೆರವೇರಿಸುವ ಮೂಲಕ ವಾಟರ್ ಡಿಸ್ಪೆನ್ಸರ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಭಾಷಾ ಹಸನಬ್ಬ, ಗುಜರಾತ್ ಮೂಲದ ಉದ್ಯಮಿ ಮೆಹಬೂಬ್, ಎಚ್.ಐ.ಎಫ್ ಇಂಡಿಯಾ ಅಧ್ಯಕ್ಷ ನಝೀಮ್ ಎ.ಕೆ ಉಪಸ್ಥಿತರಿದ್ದರು.
ಮೀನುಗಾರಿಕೆ ಉಪ ನಿರ್ದೇಶಕ ಹರೀಶ್ ಕುಮಾರ್ ಡಿ.ಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮರ್ಹೂಮ್ ಎಸ್, ಎಂ ಬಶೀರ್ ಅವರ ಸೇವೆ ಮತ್ತು ಅವರ ಸಮುದಾಯ ಮೇಲಿರುವ ಕಾಳಜಿಯನ್ನು ಸ್ಮರಿಸಲಾಯಿತು.
ಎಚ್.ಐ.ಎಫ್ ಇಂಡಿಯಾದ ‘ಪ್ರಾಜೆಕ್ಟ್ ಭೂಂದ್’ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಬೋರ್ ವೆಲ್, ನೀರಿನ ಪೈಪ್ ಲೈನ್, ಮುಂತಾದ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಂತೆ ದಕ್ಕೆಯಲ್ಲಿ ಸ್ಥಾಪಿಸಿದ ನೀರಿನ ಘಟಕ ಸಂಸ್ಥೆಯ 5ನೇದ್ದಾಗಿದೆ ಎಂದು ಹೇಳಿದ ರಿಝ್ವಾನ್ ಪಾಂಡೇಶ್ವರ್, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Join Whatsapp
Exit mobile version